ಬಿಜೆಪಿಯವರ ಜನಾಕ್ರೋಶ ಯಾತ್ರೆ ಪ್ರಧಾನಿ ವಿರುದ್ಧ: ಲಾಡ್

7 Dwd 1 Santosh Lad
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಲೆ ಏರಿಕೆ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ, ಪ್ರಧಾನಿ ಮೋದಿಯವರ ವಿರುದ್ಧ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಬೆಲೆ ಏರಿಕೆಗೆ ಮೋದಿಯವರೇ ಕಾರಣ. ಆದರೆ, ಬಿಜೆಪಿಯವರಿಗೆ ಅವರ ಹೆಸರು ಹೇಳಲಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಹೆಸರು ಹೇಳಿ ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ. ಬಿಜೆಪಿ ಅವಽಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಅಂಕಿ- ಅಂಶಗಳೊ0ದಿಗೆ ಮಾತನಾಡಲಿ. ಪ್ರಚಾರಕ್ಕಾಗಿ ಈ ರೀತಿ ಬಿಜೆಪಿಯವರು ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.

* ಜೋಶಿ ಅವರು ಎಷ್ಟು ದಿನ ಸದನಕ್ಕೆ ಹಾಜರಾಗಿದ್ದಾರೆ?:

ವಕ್ ಬಿಲ್ ಚರ್ಚೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾ0ಕಾ ಗಾಂಧಿ ಗೈರಾಗಿರುವುದನ್ನು ಪ್ರಸ್ತಾಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸದನಕ್ಕೆ ಎಷ್ಟು ದಿನ ಹಾಜರಾಗಿದ್ದಾರೆ? ಎಂದು ಲಾಡ್ ಪ್ರಶ್ನಿಸಿದರು. ಲೋಕಸಭೆಯ ಯಾವ ಚರ್ಚೆಯಲ್ಲಿ ಅವರು ಭಾಗಿಯಾಗಿದ್ದಾರೆ? ಬಿಜೆಪಿಯ 10 ವರ್ಷಗಳ ಅವಧಿಯಲ್ಲೇ ಹಿಂದುಗಳು ತೊಂದರೆಯಲ್ಲಿದ್ದಾರೆ. ತಲೆತಲಾಂತರಗಳಿ0ದ ಹಿಂದುಗಳು ಆತಂಕದಲ್ಲಿ ಇರಲಿಲ್ಲ. ಬಿಜೆಪಿಯವರಿಗೆ ಹಿಂದು, ಮುಸ್ಲಿಂ ಬಿಟ್ಟು ಬೇರೇನೂ ಇಲ್ಲ. ಈ ದೇಶವನ್ನು ಅಧೋಗತಿಗೆ ಕೊಂಡೊಯ್ಯಬೇಡಿ. ನೋಟು ಅಮಾನ್ಯೀಕರಣದ ಬಗ್ಗೆ ಚರ್ಚೆ ಇಲ್ಲ, ಮೇಕ್ ಇನ್ ಇಂಡಿಯಾ ಬಗ್ಗೆ ಚರ್ಚೆ ಇಲ್ಲ. ಹಿಂದಿನ ಪ್ರಧಾನಿಗಳ ಅವಧಿಯಲ್ಲಿ ಜಿಡಿಪಿ ಬೆಳೆದಿದೆ. ಆದರೆ, ಇವರ ಅವಧಿಯಲ್ಲಿ ಮಾತ್ರ ಬೆಳವಣಿಗೆ ಆಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net