ಬಿಜೆಪಿಯಿಂದ ತನಿಖೆ ಹಾದಿ ತಪ್ಪಿಸುವ ಯತ್ನ

kukkudige ravndra
Published on

ಕೊಪ್ಪ: ಸಾವಿನ ಮನೆಯಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುತ್ತಿದ್ದು, ತನಿಖೆ ವರದಿ ಬರುವ ಮೊದಲೇ ಕೊಲೆ ಎಂದು ಹೇಳುತ್ತಿದ್ದಾರೆ. ಕೊಲೆ ಮಾಹಿತಿ ಬಿಜೆಪಿ ಅವರ ಬಳಿ ಇದ್ದರೆ ನೀಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿ ಶಮಿತಾ ಸಾವಿನ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇದೆ. ತನಿಖೆ ನಂತರ ಆತ್ಮಹತ್ಯೆಯೋ?, ಕೊಲೆಯೋ? ಎಂದು ತಿಳಿಯಲಿದೆ. ಅದಕ್ಕೂ ಮೊದಲೂ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಶಾಸಕ ರಾಜೇಗೌಡರು ಮೃತ ವಿದ್ಯಾರ್ಥಿನಿ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಇಲಾಖೆಯಿಂದ ಪರಿಹಾರದ ಮೊತ್ತ ನೀಡಲು ಮುಂದಾಗಿದ್ದರು. ಆದರೆ ಬಾಲಕಿ ಪಾಲಕರು ಕೊಲೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅವರಿಗೆ ಅನುಮಾನಗಳಿದ್ದರೆ ಪತ್ರದಲ್ಲಿ ಬರೆದುಕೊಡಲಿ ಎಂದು ಶಾಸಕರು ತಿಳಿಸಿದ್ದಾರೆ. ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಾಲಕರ, ಸಾರ್ವಜನಿಕರ, ಶಿಕ್ಷಕರ ಸಭೆ ನಡೆಸಿ ಆಗಿರುವ ಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತರದ ಅಧಿಕಾರಿಗಳಿಬ್ಬರ ಮೇಲೆ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮಾತನಾಡಿ, ಈ ಪ್ರಕರಣವನ್ನು ಶಾಸಕ ರಾಜೇಗೌಡರ ಮೇಲೆ ಕಟ್ಟಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಕರಣದ ಬಗ್ಗೆ ಜೀವರಾಜ್ ಆಸಕ್ತಿವಹಿಸಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತನಿಖೆ ಮಾಡಿಸಲಿ. ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈ ಪ್ರಕರಣವನ್ನು ಎನ್‌ಐಎಗೆ ವಹಿಸಿಲಿ ಎಂದರು.

ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಪೂಜಾರಿ, ಸಂತೋಷ್ ಕುಲಾಸ್, ತಾಹಿಬ್, ಸಂದೇಶ್, ದೀಪಕ್, ಪೂರ್ಣೇಶ್ ಸಿಗದಾಳು, ರಜಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net