ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ದಾಳಿ

FotoJet (1)
Published on

ಕೊರಟಗೆರೆ : ಮತಗಳವು ಮೂಲಕ ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಬಿಜೆಪಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳ ಮೇಲೆ ನೇರ ದಾಳಿ ನಡೆಸಿದೆ ಎಂದು ಬ್ಲಾಕ್​ ಕಾಂಗ್ರೆಸ್​ ನಗರಾಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್​ ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್​ನಿಂದ ಆಯೋಜಿಸಿದ್ದ ವೋಟ್​ ಚೋರಿ ವಿರೋಧಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ರಾಹುಲ್​ ಗಾಂಧಿ ಮತಗಳ್ಳತನದ ಸಾಕ್ಷಿಗಳನ್ನು ಬಹಿರಂಗಪಡಿಸಿದರೂ ಚುನಾವಣಾ ಆಯೋಗ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಮತ್ತು ಆಯೋಗದ ಈ ಮೌನ ಜನತೆಯ ವಿಶ್ವಾಸಕ್ಕೆ ದ್ರೋಹವಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಕಾಂಗ್ರೆಸ್​ ಹೋರಾಟ ಮುಂದುವರಿಸುತ್ತದೆ. ಸಹಿ ಸಂಗ್ರಹ ಅಭಿಯಾನವನ್ನು ಹಳ್ಳಿಹಳ್ಳಿಗೆ, ಮನೆಮನೆಗೆ ತಲುಪಿಸಿ ಸತ್ಯದ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಮುಖಂಡ ಎಚ್​.ಕೆ.ಮಹಲಿಂಗಪ್ಪ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆಯಾಗಿದೆ. ಬಿಜೆಪಿ ಕರ್ನಾಟಕದಲ್ಲಿ ಜನಾದೇಶದಿಂದಲ್ಲ, ಹಿಂಬಾಗಿಲು ಮೂಲಕ ಅಧಿಕಾರಕ್ಕೇರಿದೆ ಎಂದು ತಿಳಿಸಿದರು.

ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅರಕೆರೆ ಶಂಕರ್​ ಮಾತನಾಡಿ, ಕಾಂಗ್ರೆಸ್​ ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಮುನ್ನಡೆಸುವುದು ನಮ್ಮ ಬದ್ಧತೆಯ ಧ್ಯೇಯ. ಗ್ಯಾರಂಟಿ ಯೋಜನೆಗಳು ಯಾವುದೇ ಧಾರ್ಮಿಕ ಅಥವಾ ಜಾತಿ ಆಧಾರದ ಮೇಲೆ ನೀಡಲಿಲ್ಲ ಎಲ್ಲ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಕ್ಕಿದೆ ಎಂದರು.

ಮುಖಂಡರಾದ ಎಲ್​.ರಾಜಣ್ಣ, ವಿನಯ್​ಕುಮಾರ್​, ಎಚ್​.ಎಂ.ರುದ್ರಪ್ರಸಾದ್​, ಮಕ್ತಿಯಾರ್​, ಗಣೇಶ್​, ಅರವಿಂದ್​, ಕೆ.ಬಿ.ಲೋಕೇಶ್​, ಹೊಳವನಹಳ್ಳಿ ಕುಂಬಿನರಸಿಂಹಯ್ಯ, ತುಂಗಮಂಜುನಾಥ್​, ಭೈರೇಶ್​, ಜಯರಾಮ್​, ನಾಗರಾಜು, ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಮಂಜಮ್ಮ, ಲಕ್ಷಿ$್ಮದೇವಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net