

ಚಿತ್ರದುರ್ಗ: ದೇಶದ ಅಭಿವೃದ್ಧಿ ಶಿಕ್ಷಣ ಮತ್ತು ಜ್ಞಾನಾರ್ಜನೆಯಿಂದ ಮಾತ್ರ ಸಾಧ್ಯವೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ನಗರದ ಧ್ಯೇಯ ಪಥ ಅಕಾಡೆಮಿ ಹಾಗೂ ಬಿಜೆಪಿ ಶಿಕ್ಷಕರ ಪ್ರಕೋಷ್ಠ ಜಿ.ಆರ್.ಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಮೋದಿಃ20 ಡ್ರೀಮ್ಸ್ ಮೀಟ್ ಡೆಲವರಿ ಇಂಗ್ಲಿಷ್ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ‌್ಯಕ್ರಮ ಉ ದ್ಘಾಟಿಸಿ ಮಾತನಾಡಿ,ಶಿಕ್ಷಣವಿಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಬಲವಾಗಿ ಪ್ರತಿ ಪಾದಿಸಿದ್ದಾರೆ. ಇದೇ ಬದ್ಧತೆ ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಲ್ಲೂ ಇತ್ತು.
ಆದ್ದರಿಂದಲೇ ಪ್ರಧಾನಿ ಅವರು,ಯಾವುದೇ ವಿರೋಧ ಎದುರಾದರೂ ದೇಶದಲ್ಲಿ ರಾಷ್ಟೀಯ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ ರು. ತಾಂತ್ರಿಕ ಜ್ಞಾನ ನೀಡದ ಶಿಕ್ಷಣದಿಂದ ಪ್ರಯೋಜನವಿಲ್ಲ. ಪ್ರತಿ ವಿದ್ಯಾರ್ಥಿ ತಾಂತ್ರಿಕ ಜ್ಞಾನಾಧರಿತ ವಿದ್ಯೆಗೆ ಹೆಚ್ಚಿನ ಒತ್ತು ಕೊಡಬೇಕಿದೆ. ಕಲಿಕೆ ತಕ್ಕಂತೆ ಉದ್ಯೋಗವೆಂಬುದು ಪ್ರಧಾನಿ ಪರಿಕಲ್ಪನೆಯಾಗಿದೆ.
ಯಾವ ದೇಶ(ಅಮೆರಿಕ)ಮೋದಿ ಅವರನ್ನು ತಮ್ಮ ದೇಶಕ್ಕೆ ಬರಬಾರದು ಎಂದು ಹೇಳಿತ್ತೋ ಅಂಥ ದೇಶವೂ ಸೇರಿದಂತೆ ಪ್ರಪಂಚ ಎ ದುರು ಮೋದಿ ಅಗ್ರಮಾನ್ಯ ನಾಯಕರಾಗಿ ಬೆಳೆದಿದ್ದಾರೆ. 12.50 ವರ್ಷದ ಗುಜರಾತ್ ಸಿಎಂ ಹಾಗೂ ಏಳೂವರೆ ವರ್ಷಗಳ ಕಾಲ ಪ್ರಧಾನಿಯಾಗಿ ಜಗತ್ತಿನ ಎದುರು ಭಾರತವನ್ನು ಹೆಮ್ಮೆಯಿಂದ ನಿಲ್ಲುವಂತೆ ಮಾಡಿದ್ದಾರೆ.
ಮೋದಿಃ20 ಪುಸ್ತಕ ಸಂಘ ಪರಿವಾರ,ಬಿಜೆಪಿ ಕಾರ‌್ಯಕರ್ತರು ಬರೆದಿದ್ದು ಅಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್,ಧಾರ್ಮಿಕ ಹರಿಕಾರ ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ನಾನಾ ಕ್ಷೇತ್ರಗಳ 21 ದಿಗ್ಗಜರು ಮೋದಿ ಅವರ ಆಡಳಿತವನ್ನು ವಿಮರ್ಶಿಸಿ ದ್ದಾರೆ. ಪ್ರಧಾನಿಯಾಗಿ ಮೋದಿ ಅವರ ಸಾಧನೆಗಳಿಂದಾಗಿ ವಿಶ್ವವಿಂದು ಭಾರತದೆಡೆ ನೋಡುತ್ತಿದೆ. ಮೋದಿಃ20 ಪುಸ್ತಕದ ಕನ್ನಡ ಅವ ತರಣಿಕೆ ಶೀಘ್ರ ಬರಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಶಿವಯೋಗಿಸ್ವಾಮಿ ಮಾತನಾಡಿ,ಜಗತ್ತಿನ ಅತ್ಯಂತ ಜನಪ್ರಿಯ ನಾಯಕ ಮೋದಿ ಅ ವರೆಂದು ಅಮೆರಿಕದ ಮಿಂಟ್ ಸಂಸ್ಥೆ ಗುರುತಿಸಿದೆ. ಪ್ರಪಂಚದಲ್ಲಿ ಶಾಂತಿ ಸ್ಥಾಪಿಸುವ ಸಾಮ್ಯರ್ಥ ಮೋದಿ ಅವರಲ್ಲಿದೆ ಎಂಬುದು ಜಗತ್ತಿನ ನಂಬಿಕೆ. ಮೋದಿ ನುಡಿದಂತೆ ಆಡಳಿತ ನಡೆಸಿದ್ದಾರೆ ಎಂದರು. ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಬಾರ್ಕಿ ಪುಸ್ತಕ ಕುರಿತು ಮಾತನಾಡಿ ದರು. ದಾವಣಗೆರೆ ವಿವಿ ಉಪಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಅಧ್ಯಕ್ಷತೆ ವಹಿಸಿದ್ದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ಕುಡಾ ಅಧ್ಯಕ್ಷ ಸುರೇಶ್ ಸಿದ್ದಾಪುರ,ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್,ಸಂಪತ್‌ಕುಮಾರ್,ಮೋಹನ್ ಮತ್ತಿತರರು ಇದ್ದರು. ನರೇಂದ್ರ ಸ್ವಾಗತಿಸಿದರು.