ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತೆ ಅಭಿಯಾನ

dhp-28-1
Published on

ದೇವರಹಿಪ್ಪರಗಿ: ಬಿಜೆಪಿ ಮಂಡಲದ ಯುವಮೋರ್ಚಾ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದ ನಿಮಿತ್ತ ಮಲ್ಲಯ್ಯನ ದೇವಸ್ಥಾನ ಆವರಣದಲ್ಲಿ ಕಸಗೂಡಿಸಿ ಸ್ವಚ್ಛಗೊಳಿಸಿದರು.ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ದೇವಸ್ಥಾನ ಆವರಣಕ್ಕೆ ಆಗಮಿಸಿದ ಕಾರ್ಯಕರ್ತರು ಸ್ವಚ್ಛತೆ ಕಾರ್ಯ ಕೈಗೊಂಡರು.

ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜು ಮೆಟಗಾರ ಮಾತನಾಡಿ, ಪ್ರಧಾನಿ ಮೋದಿಯವರ ಆಶಯದಂತೆ ಪ್ರತಿ ತಿಂಗಳ 4ನೇ ಭಾನುವಾರ ಧಾರ್ಮಿಕ ಸ್ಥಳಗಳು ಸೇರಿ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಬಾರಿ ಮಲ್ಲಯ್ಯನ ದೇವಸ್ಥಾನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಶ್ರೀಧರ ನಾಡಗೌಡ, ಹುಸೇನ ಗೌಂಡಿ, ಶಂಕರ ಜಮಾದಾರ, ಸೋಮು ದೇವೂರ, ದಯಾನಂದ ರಾಠೋಡ, ಪಿಂಟೂ ಬಾಸುತ್ಕರ್, ಸಲಬಯ್ಯ ಸದಯ್ಯನಮಠ, ಸಂಗು ಹಳಿಮನಿ, ಬಲಭೀಮ ಮೆಟಗಾರ, ಪವನ ಗುಂದಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net