

ಕೋಲಾರ: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನಾವು ದೇಶದಲ್ಲಿ ನೆಮ್ಮದಿಯಿಂದ ಇರಲು ಕಾರಣ ನಮ್ಮ ಸೈನಿಕರು, ದೇಶದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸೈನಿಕರಿಗೆ ಗೌರವ ನೀಡುತ್ತೇವೆ. ದೇಶದ ತಂಟೆಗೆ ಬಂದ್ರೆ ಯಾರನ್ನೂ ನೋಡುವಿದಿಲ್ಲ ಎಂದು ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ತಿರಂಗಾ ಯಾತ್ರೆಗೆ ಹಲವರು ಬೆಂಬಲ ನೀಡಿ, ಕೋಲಾರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಿದೆ. ಭಾರತದ ಪ್ರಧಾನ ಮಂತ್ರಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ನಾವೆಲ್ಲರೂ ಮೋದಿ ಬೆಂಬಲಕ್ಕೆ ನಿಲ್ಲಬೇಕು ಎಂದರು.
ತ್ರಿವರ್ಣ ಧ್ವಜ ನಮ್ಮ ದೇಶದ ಹೆಮ್ಮೆಯಾಗಿದ್ದು, ಇದು ಎಲ್ಲ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ಪ್ರತಿಯೊಬ್ಬರ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವಂತಾಗಿದೆ. ದೇಶದ ಸೈನಿಕರು ಮತ್ತು ರೈತರು ತಮ್ಮ ತ್ಯಾಗ, ತಪಸ್ಸು ಮತ್ತು ಸಮರ್ಪಣೆಯ ಮೂಲಕ ಅಸಂಖ್ಯಾತ ಹೋರಾಟಗಾರರನ್ನು ನಾವು ನೆನೆಯುವ ಕೆಲಸ ಮಾಡಬೇಕು ಎಂದು ಅಭಿ ಭಾರದ್ವಾಜ್ ನಾಯ್ಡು ತಿಳಿಸಿದರು.