ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸದಾನಂದ ನೇಮಕ

01
Published on

ಬೆಳಗಾವಿ: ಉತ್ತರ ಮತಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಸದಾನಂದ ಗುಂಟೆಪ್ಪನವರ ಅವರನ್ನು ಮುಖಂಡರು ಭಾನುವಾರ ನೇಮಕ ಮಾಡಿದ್ದಾರೆ. ಸದಾನಂದ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಸಿಕೊಂಡಿದ್ದರಿಂದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಇತರ ಮುಖಂಡರು ಅವರನ್ನು ಆಯ್ಕೆ ಮಾಡಿದ್ದಾರೆ.

ಅಲ್ಲದೆ, ಉತ್ತರ ಮತಕ್ಷೇತ್ರದ ಪ್ರಧಾನ ಕಾರ್ಯದರ್ಶಿಯನ್ನಾಗಿ ವೀರಯ್ಯ ಖೋತ ಹಾಗೂ ವಿಜಯ ಕೊಡಗನೂರ ಅವರನ್ನು ನೇಮಕ ಮಾಡಲಾಗಿದೆ. ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ, ಉತ್ತರ ಮತಕ್ಷೇತ್ರದ ಅಧ್ಯಕ್ಷ ಪಾಂಡುರಂಗ ಧಾಮಣೇಕರ, ವೀರೇಶ ಕಿವಡಸಣ್ಣವರ, ಮುರುಘೇಂದ್ರಗೌಡ ಪಾಟೀಲ, ಕಿರಣ ಜಾಧವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net