ಬಡವರ ಮನೆಗೆ ಸರ್ಕಾರಿ ಸವಲತ್ತು ಮಾಹಿತಿ : ಜಿಲ್ಲಾ ಬಿಜೆಪಿ ಮುಖಂಡ ಮಾಧವ ಮಾವೆ ಕಿವಿಮಾತು

New Project (8)
Published on

ಬಂಟ್ವಾಳ: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಡವರ ಮನೆಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುವ ಮೂಲಕ ಪಕ್ಷ ಸಂಘಟನೆ ಬಲಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಮಾಧವ ಮಾವೆ ಹೇಳಿದರು.

ಬಂಟ್ವಾಳ ಮಂಡಲ ಪೆರಾಜೆ ಶಕ್ತಿಕೇಂದ್ರದಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಸಭಾಂಗಣದಲ್ಲಿ ಭಾನುವಾರ ಕಾರ್ಯಕರ್ತರ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ ಚಾಲನೆ ನೀಡಿದರು. ಮಂಡಲ ಮಾಜಿ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ಉದ್ಘಾಟನಾ ಭಾಷಣ ಮಾಡಿದರು. ಪೆರಾಜೆ ಶಕ್ತಿಕೇಂದ್ರ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ವಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ ರೈ, ಬಂಟ್ವಾಳ ಮಂಡಲ ಅಭ್ಯಾಸ ವರ್ಗ ಸಂಚಾಲಕ ಹರೀಶ ಶೆಟ್ಟಿ, ಗ್ರಾಪಂ ಸದಸ್ಯರಾದ ರಾಜಾರಾಮ ಕಾಡೂರು, ಹರೀಶ ರೈ ಪಾಣೂರು, ಮಮತಾ ತಿಲಕ ಗೌಡ ಉಪಸ್ಥಿತರಿದ್ದರು. ಶಕ್ತಿಕೇಂದ್ರ ಅಭ್ಯಾಸ ವರ್ಗದ ಸಂಚಾಲಕ ಉಮೇಶ ಎಸ್.ಪಿ. ಸ್ವಾಗತಿಸಿದರು. ಯತಿರಾಜ ಪಿ. ನಿರೂಪಿಸಿದರು.

ವಿವಿಧ ಗೋಷ್ಠಿಗಳು

ಬಿಜೆಪಿ ನಾಯಕರಾದ ಸಂದೀಪ್ ಶೆಟ್ಟಿ ಅರೆಬೆಟ್ಟು, ಶಿವಪ್ರಸಾದ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಬೂತ್ ಸಮಿತಿ ಅಧ್ಯಕ್ಷರಾದ ಗಣೇಶ ಕೊಂಕಣ ಪದವು, ಲೋಹಿತ್ ಮಂಜೊಟ್ಟಿ, ಪುರುಷೋತ್ತಮ ಮಡಲ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಪ್ರಮುಖರಾದ ದೇವಪ್ಪ ಪೂಜಾರಿ, ಸುದರ್ಶನ ಬಜ, ಹಿರಿಯ ಕಾರ್ಯಕರ್ತರಾದ ರಾಮಣ್ಣ ಗೌಡ ದೆಪ್ಪೊಳಿ, ಸೀತಾರಾಮ ನಾಯ್ಕ ಪಾಳ್ಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net