ಬಿಜೆಪಿ ಕಾರ್ಯಕರ್ತನ ಐಡಿ ಕಾರ್ಡ್ ದುರುಪಯೋಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ

Araga Gnandra (2)
Published on

ತೀರ್ಥಹಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ತಂಡ ಗುರುವಾರ ವಶಕ್ಕೆ ಪಡೆದಿದ್ದ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ಅವರು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಮೊಬೈಲ್ ಖರೀದಿಸಿದ ವೇಳೆ ನೀಡಿದ್ದ ಐಡಿ ಕಾರ್ಡ್ ಬಳಸಿ ಭಯೋತ್ಪಾದಕರಿಗೆ ಸಿಮ್‌ಕಾರ್ಡ್ ಒದಗಿಸಲಾಗಿತ್ತು. ಇಂತಹ ಆತಂಕಕಾರಿ ಘಟನೆಗಳು ಪಟ್ಟಣದಲ್ಲಿ ನಡೆಯುತ್ತಿವೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಸಾಯಿ ಪ್ರಸಾದ್ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಸಾಯಿ ಪ್ರಸಾದ್ ಅವರ ಐಡಿ ದುರುಪಯೋಗ ಪಡಿಸಿಕೊಂಡಂತೆ ಇನ್ನೂ ಎಂಟು ಜನರ ಐಡಿ ದುರುಪಯೋಗ ಆಗಿದೆ ಎಂಬ ಆತಂಕಕಾರಿ ಮಾಹಿತಿಯೂ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net