ರಾಷ್ಟ್ರೀಯವಾದ ಮೊಳಗಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿ: ಆರಗ ಜ್ಞಾನೇಂದ್ರ ಸಲಹೆ

10 tth 3
ಮಂಡಲ ಬಿಜೆಪಿ ನೂತನ ಪದಾಽಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನವೀನ್ ಹೆದ್ದೂರು ಅವರಿಗೆ ಪಕ್ಷದ ಧ್ವಜ ನೀಡಿ ಅಭಿನಂದಿಸಲಾಯಿತು. ಆರಗ ಜ್ಞಾನೇಂದ್ರ, ಟಿ.ಡಿ.ಮೇಘರಾಜ್, ಭಾನುಪ್ರಕಾಶ್, ನಾಗರಾಜ ಶೆಟ್ಟಿ, ರಾಘವೇಂದ್ರ ನಾಯಕ್ ಇತರರಿದ್ದರು.
Published on

ತೀರ್ಥಹಳ್ಳಿ; ಗ್ರಾಮೀಣ ಭಾಗದ ಕಟ್ಟ÷ಕಡೆಯ ವ್ಯಕ್ತಿಯನ್ನೂ ತಲುಪುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವ ಮತ್ತು ರಾಷ್ಟಿçÃಯ ವಾದವನ್ನು ಮೊಳಗಿಸಲು ಪಕ್ಷದ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಡಲ ಬಿಜೆಪಿ ನೂತನ ಪದಾಽಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು ಭಯೋತ್ಪಾದನೆಯನ್ನು ಹತ್ತಿಕ್ಕುವ ಮೂಲಕ ಶಾಂತಿ ಸ್ಥಾಪನೆಯಾಗಿದೆ. ಆರ್ಥಿಕವಾಗಿ ಕಳೆದ ಹತ್ತು ವರ್ಷಗಳಲ್ಲಿ ಹತ್ತನೇ ಸ್ಥಾನದಿಂದ ಐದನೇ ಸ್ಥಾನಕ್ಕೇರಿದೆ. ಹೀಗಾಗಿ ಸಂಸದ ಬಿ.ವೈ.ರಾಘವೇಂದ್ರರನ್ನು ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸುವ ಪಣತೊಡಬೇಕಿದೆ ಎಂದರು.
ಪಕ್ಷದ ಹುದ್ದೆಗಳು ಕೇವಲ ಅಲಂಕಾರಿಕ ಸ್ಥಾನಗಳಲ್ಲ. ಎಲ್ಲ ಆಕಾಂಕ್ಷಿಗಳಿಗೂ ಒಮ್ಮೆಲೆ ಸ್ಥಾನ ಕಲ್ಪಿಸುವುದೂ ಅಸಾಧ್ಯ. ಹೀಗಾಗಿ ಸಂಭ್ರಮದ ನಡುವೆ ನಿರಾಸೆ ಕಂಡುಬAದಿದ್ದು ಕಳೆದ ೧೫ ದಿನಗಳಿಂದ ಸಂತೈಸುವ ಪ್ರಯತ್ನವೂ ನಡೆದಿದೆ. ಮಂಡಲದ ನೂತನ ಅಧ್ಯಕ ನವೀನ್ ಹೆದ್ದೂರು ಅತ್ಯಂತ ಸಮರ್ಥರಾಗಿದ್ದು ಕಾರ್ಯಕರ್ತರ ಉತ್ತಮ ಸಂಪರ್ಕದೊAದಿಗೆ ಕ್ಷೇತ್ರದ ಪರಿಚಯವನ್ನು ಹೊಂದಿದವರು. ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ದುಡಿಯಬೇಕಿದೆ ಎಂದರು.
ನೂತನ ಅಧ್ಯಕ್ಷ ನವೀನ್ ಹೆದ್ದೂರು ಮಾತನಾಡಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಪಕ್ಷ ನೀಡಿದ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿದೆ. ಹಿರಿಯರ ಮಾರ್ಗದರ್ಶನ ಪಡೆದು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಹಿರಿಯ ಮುಖಂಡರಾದ ಎಂ.ಬಿ.ಭಾನುಪ್ರಕಾಶ್, ಕೆ.ನಾಗರಾಜ ಶೆಟ್ಟಿ, ಮಾಜಿ ಅಧ್ಯಕ್ಷ ರಾಘವೇಂದ್ರ ನಾಯಕ್, ಅಶೋಕಮೂರ್ತಿ, ಸಾಲೇಕೊಪ್ಪ ರಾಮಚಂದ್ರ, ಸಿ.ಬಿ.ಈಶ್ವರ್, ಶಂಕರನಾರಾಯಣ ಐತಾಳ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪ್ರಶಾಂತ್ ಕುಕ್ಕೆ, ಕೆ.ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net