ಹಿಂದು ಸಂಸ್ಕಾರದಂತೆ ಪೂಜೆ ಸಲ್ಲಿಸಲಿ: ರಾಜ್ಯಸರ್ಕಾರಕ್ಕೆ ಬಿಜೆಪಿ ಕಾರ್ಯಕರ್ತರ ಒತ್ತಾಯ

BJP workers appeal to state government Mandya
Published on

ಮಂಡ್ಯ: ಲೇಖಕಿ ಬಾನು ಮುಷ್ತಾಕ್ ಅವರು ಹಿಂದು ಸಂಸ್ಕಾರದಂತೆ ನಾಡಹಬ್ಬ ದಸರಾ ಉದ್ಘಾಟನೆ ಹಾಗೂ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಅವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಾವು ಯಾವ ಜಾತಿ, ಮತ, ಪಂಥಗಳ ವಿರೋಧಿಗಳಲ್ಲ. ನಾವೆಲ್ಲರೂ ಭಾರತೀಯರು, ಹಿಂದು, ಕ್ರೈಸ್ತ, ಮುಸಲ್ಮಾನ ಎಲ್ಲರನ್ನೂ ಪ್ರೀತಿಸುವವರು. ಆದರೆ, ನಮ್ಮ ಮೈಸೂರು ನಾಡಹಬ್ಬ ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ಅವರು ಹಣೆಗೆ ಸಿಂಧೂರ ಇಟ್ಟುಕೊಳ್ಳಬೇಕು ಎಂದು ಆಗ್ರಹಿಸಿದರು.

ನಾಡದೇವತೆ ತಾಯಿ ಚಾಮುಂಡೇಶ್ವರಿ ಪೂಜೆಯನ್ನು ಹಿಂದು ಸಂಪ್ರದಾಯಂತೆ ಮಾಡಬೇಕು. ಅಂದರೆ, ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಅರಿಸಿಣ, ಕುಂಕುಮವಿಟ್ಟು, ಗಂಧದ ಕಡ್ಡಿ, ಕರ್ಪೂರರ ಬೆಳಗುವರೆ, ಒಂದು ವೇಳೆ ಬೆಳಗಿದ್ದಲ್ಲಿ ನಾವು ಸ್ವಾಗತಿಸುತ್ತೇವೆ. ಅವರ ಧರ್ಮದಲ್ಲಿ ನಾವು ಮೂರ್ತಿಯನ್ನು ಪೂಜೆ ಮಾಡುವುದಿಲ್ಲವೆಂದು ಹೇಳುತ್ತಾರೆ. ಆದರೆ ನಮ್ಮ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದಾದರೆ ಸ್ವಾಗತ. ಇದರ ಬಗ್ಗೆ ಮುಖ್ಯಮಂತ್ರಿ ಅವರು ಮಾತನಾಡಿ ಕರ್ನಾಟಕ ಜನತೆಗೆ ಸಂದೇಶ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಶಿವಕುಮಾರ ಆರಾಧ್ಯ, ಶಿವಲಿಂಗಪ್ಪ, ಚಂದ್ರು, ಪ್ರಸನ್ನ ಕುಮಾರ್, ಯೋಗೇಶ್, ಷಣ್ಮುಖ ಆರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net