ಹಿಂದುತ್ವದ ಉಳುವಿಗಾಗಿ ಬಿಜೆಪಿ ಕಾರ್ಯ: ಶಾಸಕ ಚನ್ನಬಸಪ್ಪ

mla channabasappa
ಶಾಸಕ ಎಸ್.ಎನ್.ಚನ್ನಬಸಪ್ಪ
Published on

ಶಿವಮೊಗ್ಗ: ಶಿವಮೊಗ್ಗವು ಈ ಹಿಂದೆ ಸಮಾಜವಾದಿ ನೆಲೆಗಟ್ಟು ಹೊಂದಿತ್ತು. ಅದನ್ನು ಬದಲಾವಣೆ ಮಾಡಿ ಹಿಂದುತ್ವದ ನೆಲೆಗಟ್ಟಾಗಿ ಮಾಡಿರುವುದು ಬಿಜೆಪಿ ವೈಶಿಷ್ಟೃವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಕಾಂಗ್ರೆಸ್ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದರೆ, ಬಿಜೆಪಿ ಹಿಂದುತ್ವದ ಉಳಿವಿಗಾಗಿ ಕಾರ್ಯರ್ವಹಿಸುತ್ತಿದೆ. ಚುನಾವಣೆ ಬಂದಾಗ ಮಾತ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಸದಾ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ಚುನಾವಣೆ ಎಂದರೆ ಭಯ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಚುನಾವಣೆಗೆ ಕೈಜೋಡಿಸಲಿದ್ದು ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಪೇಜ್ ಪ್ರಮುಖರ ಸಭೆಗೆ ಜೆಡಿಎಸ್‌ನ ಕೆಲ ನಾಯಕರನ್ನೂ ಆಹ್ವಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net