

ಕಾರವಾರ: ತಾಲೂಕಿನ 9 ಗ್ರಾಪಂಗಳ ಚುನಾವಣೆ ಶುಕ್ರವಾರ ನಡೆದಿದ್ದು, ಅದರಲ್ಲಿ 5 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು, 3 ರಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ ಒಂದು ಗ್ರಾಪಂನಲ್ಲಿ ಸಮ್ಮಿಶ್ರ ಆಡಳಿತ ರಚನೆಯಾಗಿದೆ.
ಚೆಂಡಿಯಾ, ತೋಡೂರು, ಕೆರವಡಿ, ಘಾಡಸಾಯಿ, ಮುಡಗೇರಿ ಗ್ರಾಪಂಗಳಲ್ಲಿ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಕದ್ರಾ, ಕಡವಾಡ, ವೈಲವಾಡ ಗ್ರಾಪಂಗಳಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಚಿತ್ತಾಕುಲಾದಲ್ಲಿ ಅಧ್ಯಕ್ಷರು ಕಾಂಗ್ರೆಸ್, ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರಾಗಿದ್ದಾರೆ.
ಒಟ್ಟಾರೆ ಕಾರವಾರ ತಾಲೂಕಿನ 18 ಗ್ರಾಪಂಗಳಲ್ಲಿ 11 ಬಿಜೆಪಿ ತೆಕ್ಕೆಗೆ ಸೇರಿದ್ದರೆ, ಎರಡರಲ್ಲಿ ಸಮ್ಮಿಶ್ರ ಆಡಳಿವಿದೆ. ಒಂದು ಗ್ರಾಪಂನಲ್ಲಿ ಯಾವುದೇ ಪಕ್ಷದ ಬೆಂಬಲಿತರಿಲ್ಲ. ನಾಲ್ಕರಲ್ಲಿ ಮಾತ್ರ ಕಾಂಗ್ರೆಸ್ ಸಂಪೂರ್ಣ ಅಧಿಕಾರದಲ್ಲಿದ್ದಂತಾಗಿದೆ.
ಅಧ್ಯಕ್ಷರು, ಉಪಾಧ್ಯಕ್ಷರು
ಚಿತ್ತಾಕುಲಾ-ರಾಜು ತಾಂಡೇಲ(ಅಧ್ಯಕ್ಷ), ಸೂರಜ್ ದೇಸಾಯಿ(ಉಪಾಧ್ಯಕ್ಷ), ಮುಡಗೇರಿ-ಸುರೇಂದ್ರ ಗಾಂವಕರ್, ಜ್ಯೋತಿ ಚೋಳಾರ್, ಘಾಡಸಾಯಿ-ಸುವರ್ಣ ಮಾರುತಿ ಮಾಜಾಳಿಕರ್, ಚೇತನಾ ಬಾಂದೇಕರ್, ಕದ್ರಾ-ಹನುಮವ್ವಾ ಹನುಮಂತ ವಡ್ಡರ್, ಅಶ್ವಿನಿ ಪೆಡ್ನೇಕರ್, ಕೆರವಡಿ-ರಾಮಚಂದ್ರ ಯಶ್ವಂತ ನಾಯ್ಕ, ದೀಪಾ ದೇವಿದಾಸ ನಾಯ್ಕ, ವೈಲವಾಡ-ಮೇಘನಾ ಮನೋಹರ ಗಾಂವಕರ್, ರಾಜೇಂದ್ರ ಹಾಡು ರಾಣೆ, ಕಡವಾಡ-ಪ್ರಿಯಾ ಆನಂದು ಗೌಡ, ಹೃತಿಕಾ ರಾಮಚಂದ್ರ ಹುಲಸ್ವಾರ, ಚೆಂಡಿಯಾ-ಪೂಜಾ ಪ್ರಕಾಶ ನಾಯ್ಕ, ಜೋಗಿ ನಾರಾಯಣ ಗುನಗಿ, ತೋಡೂರು-ಕರುಣಾ ಕಮಲಾಕರ ನಾಯ್ಕ, ರಾಘವೇಂದ್ರ ರತ್ನಾಕರ ತೋಡೂರಕರ್