

ಧಾರವಾಡ: ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದನ್ನು ಸ್ವಾಗತಿಸಿ ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ನಗರದ ಪಕ್ಷದ ಕಚೇರಿ ಎದುರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಂಗಗಳಲ್ಲಿ ನಾರಿಶಕ್ತಿಯನ್ನು ಪ್ರಚುರಪಡಿಸಲು ಶೇ. 33 ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಾರೆ. ಇದು ದೇಶವ್ಯಾಪಿ ಮಹಿಳೆಯರು ಸಂತಸ ಪಡುವಂಥ ನಿರ್ಧಾರ ಎಂದು ಸೀಮಾ ಮಸೂತಿ ಹೇಳಿದರು.
ಮಾಲತಿ ಹೂಲಿಕಟ್ಟಿ, ಚಂದ್ರಕಲಾ ಕೊಟಬಾಗಿ, ಶೋಭಾ ಭುಜಂಗನವರ, ಅಶ್ವಿನಿ ವೀರಾಪುರ, ಸುವರ್ಣಾ ವಾಲಿ, ರೂಪಾ ಚೌಧರಿ, ದೀಪಾ ದಾಸ್, ಮಧು ತೋಡಕರ, ನೀಲಾ ಹೆಬಸೂರ, ಇತರರಿದ್ದರು.