ಬಿಜೆಪಿ ಯಾರ ಹೆಣವನ್ನೂ ಇರಿಸಿಕೊಳ್ಳದು:ರಾಘವೇಂದ್ರ ಟಾಂಗ್

b y raghavendra (6)
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಬಿಜೆಪಿಯವರು ಜೀವಗಳನ್ನು ರಕ್ಷಣೆ ಮಾಡುತ್ತಾರೆಯೇ ಹೊರತು ಹೆಣಗಳನ್ನಲ್ಲ. ಬಿಜೆಪಿಯಲ್ಲಿ ಹೆಣಗಳನ್ನು ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಬಿವೈಆರ್, ಕರೊನಾ ಸಂದರ್ಭದಲ್ಲಿ ಲಕ್ಷಾಂತರ ಮಂದಿಯ ಜೀವ ರಕ್ಷಣೆ ಮಾಡಿದ್ದು ಬಿಜೆಪಿ ಆಡಳಿತ. ಜನರ ಜೀವ ರಕ್ಷಣೆಯೇ ಆದ್ಯತೆ ಎಂದು ಪರಿಗಣಿಸಿದ್ದು ಅಂದಿನ ರಾಜ್ಯ ಸರ್ಕಾರ. ಇಂತಹ ಬಿಜೆಪಿ ಯಾರ ಹೆಣವನ್ನೂ ಇರಿಸಿಕೊಳ್ಳುವುದಿಲ್ಲ ಎಂದರು.
ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಬದಲು ಸರ್ಕಾರ ರೈತರ ನೆರವಿಗೆ ಮುಂದಾಗಲಿ. ಕೂಡಲೇ ಬರ ಘೋಷಣೆ ಮಾಡಿ ಪರಿಹಾರ ಒದಗಿಸಲಿ. ಬರ ಘೋಷಣೆಯನ್ನೂ ಮುಂದೂಡುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಸಮರ್ಪಕವಾಗಿ ಬರ ನಿರ್ವಹಣೆ ಮಾಡದಿದ್ದರೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net