ಮತ ಎಣಿಕೆ ಏಜೆಂಟರ ಸಭೆ

Published on

ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಧಾರವಾಡ ಬಿಜೆಪಿ ಗ್ರಾಮೀಣ ಕ್ಷೇತ್ರದ ಮತ ಎಣಿಕೆ ಏಜೆಂಟರ ಸಭೆಯನ್ನು ಶನಿವಾರ ಏರ್ಪಡಿಸಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಚುನಾವಣೆಗಳಲ್ಲಿ ಏಜೆಂಟರಾಗಿ ಕೆಲಸ ಮಾಡಿದ ಅನುಭವ ಇರುವವರನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಯಾವ ರೀತಿ ಇರಬೇಕು, ಪ್ರತಿ ಬೂತಿನ ಫಲಿತಾಂಶದ ಎಲ್ಲ ಅಭ್ಯಥಿರ್ಗಳ ಅಂಕಿ ಅಂಶಗಳನ್ನು ಪಕ್ಷ ನೀಡಿದ ದಾಖಲೀಕರಣ ಪತ್ರದಲ್ಲಿ ದಾಖಲಿಸುವುದರ ಮಾಹಿತಿ ನೀಡಿದರು.

ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸುವುದು ಮತ್ತು ಸರಿಯಾದ ಸಮಯಕ್ಕೆ ಏಜೆಂಟ್ಗಳು ಹಾಜರಿರುವುದು, ರ್ಪೂಣ ಕೌಂಟಿಂಗ್ ಮುಗಿಯುವವರೆಗೆ ಅಲ್ಲಿಯೇ ಇರುವುದು ಸೇರಿ ವಿವಿಧ ವಿಷಯಗಳ ಕುರಿತು ಶಾಸಕರು ಮಾರ್ಗದರ್ಶನ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶಶಿಮೌಳಿ ಕುಲಕಣಿರ್, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಸುಭಾಸ ಚೌವ್ಹಾಣ, ಶಂಕರ ಮುಗದ, ಮಹಾಂತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ರುದ್ರಪ್ಪ ಅರಿವಾಳ, ಮೃತ್ಯುಂಜಯ ಹಿರೇಮಠ, ಷಣ್ಮುಖ ಗುರಿಕಾರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net