

ಹುಬ್ಬಳ್ಳಿ: ಇಲ್ಲಿಯ ಅಕ್ಕಿಪೇಟೆಯಲ್ಲಿ ಆಯೋಜಿಸಿದ್ದ ಮೋದಿ ಸರ್ಕಾರ ಗ್ಯಾರಂಟಿ ವಿಕಸಿತ ಭಾರತ ಯಾತ್ರೆಗೆ ಶಾಸಕ ಮಹೇಶ ಟೆಂಗಿನಕಾಯಿ ಶುಕ್ರವಾರ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಯೋಜನೆಗಳ ವಿಡಿಯೋ ಮಾಹಿತಿ ನೀಡುವ ವಾಹನ ಈ ಪ್ರದೇಶದಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ದೇಶದ ಜನರ ಆಥಿರ್ಕ ಸ್ಥಿತಿ ಸುಧಾರಿಸುವ ಸದುದ್ದೇಶ ಹಾಗೂ 2047ರ ಹೊತ್ತಿಗೆ ಭಾರತ ಆಥಿರ್ಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು "ವಿಕಸಿತ ಭಾರತ ಸಂಕಲ್ಪ ಯಾತ್ರೆ' ಆರಂಭಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಮುದ್ರಾ, ಜನಧನ್, ಪಿಎಂ ವಿಶ್ವಕರ್ಮ, ಉಜ್ವಲ ಯೋಜನೆ, ಕೃಷಿ ಸನ್ಮಾನ್, ಅನ್ನಭಾಗ್ಯ ಸೇರಿ ವಿವಿಧ ಯೋಜನೆಗಳ ಮಾಹಿತಿಯು ಎಲ್ಇಡಿ ಪರದೆಯ ಮೂಲಕ ಗ್ರಾಮ ಪಂಚಾಯತ ಹಾಗೂ ನಗರ ಪ್ರದೇಶದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಕುರಿತ ಕಿರುಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯೆ ಸುಮಿತ್ರಾ ಗುಂಜಾಳ, ಬಸವರಾಜ ಚಿಕ್ಕಮಠ, ಲೋಕೇಶ್ ಗುಂಜಾಳ, ಮಂಜುನಾಥ ಕಾಟಕರ, ಎಚ್.ಎಸ್. ಕಿರಣ, ಪೂಜಾ ರಾಯ್ಕರ್ ಭಾಗವಹಿಸಿದ್ದರು.