ಬಿಜೆಪಿ ಗೆಲುವಿಗೆ ಸಿಹಿ ಹಂಚಿ ಸಂಭ್ರಮ

03Kush03
ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಆದರ್ಶ್, ಕೃಷ್ಣ, ರಾಮು, ದೇವರಾಜ್ ಇತರರು ಹಾಜರಿದ್ದರು.
Published on

ಕುಶಾಲನಗರ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮಿಸಿದರು.

ಹರಹರ ಮೋದಿ, ಘರ್ ಘರ್ ಮೇ ಮೋದಿ ಎನ್ನುವ ಘೋಷಣೆಯೊಂದಿಗೆ ಪಟ್ಟಣದ ಗಣಪತಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಹರ್ಷೋದ್ಘಾರ ಮೊಳಗಿಸಿದರು. ಪಕ್ಷದ ಮುಖಂಡರಾದ ಜಿ.ಎಲ್.ನಾಗರಾಜ್, ಎಂ.ವಿ.ನಾರಾಯಣ, ಗಣಿಪ್ರಸಾದ್, ಕೃಷ್ಣಪ್ಪ, ಕೆ.ಎನ್.ದೇವರಾಜ್, ಡಿ.ಕೆ.ತಿಮ್ಮಪ್ಪ, ಶ್ರೀನಿವಾಸ ರಾವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net