ಮಡಿಕೇರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಕೆ.ಎಸ್. ಈಶ್ವರಪ್ಪ ಭಾಗಿ

11mdk01
Published on

ಮಡಿಕೇರಿ:ರಾಷ್ಟ್ರೀಯವಾದಿ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿ ಆಗುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಡಿಕೇರಿಗೆ ಆಗಮಿಸಿದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.


ಯಾರೂ ಮಾಡದ ಕೆಲಸವನ್ನು ಪ್ರಧಾನಿ ಆದ ನಂತರ ನರೇಂದ್ರ ಮೋದಿ ಮಾಡಿದ್ದಾರೆ. ಕೊಡಗಿನ ಇಬ್ಬರು ಶಾಸಕರು ಕೂಡ ಉತ್ತಮ ಅಭಿವೃದ್ಧಿ ಕಾರ್ಯ ಇಲ್ಲಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ೧೫೦ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲುವುದರ ಜೊತೆಗ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ದೇಶ, ಸಂಸ್ಕೃತಿ ಉಳಿಸಬೇಕು ಎನ್ನುವುದು ಬಿಜೆಪಿ ಸಿದ್ದಾಂತವಾಗಿದೆ. ಮುಂದೆ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎನ್ನುವ ಪ್ರಶ್ನೆ ಕೇಳುವ ಸ್ಥಿತಿ ಬರುತ್ತದೆ ಎಂದರು.


ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ಕೊಡಗಿನ ಎಲ್ಲಾ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದೆ. ಹೊಸ ಕೊಡಗು ಕಟ್ಟುವ ಕೆಲಸ ಆಗಿದೆ. ತಮ್ಮ ಪಕ್ಷದಿಂದ ವಿಶ್ವಾದ ರಾಜಕೀಯ ಮಾಡಲಾಗುತ್ತದೆ. ಕೊಟ್ಟ ಮಾತು ಈಡೇರಿಸಲಾಗುತ್ತದೆ. ಯಾವುದೇ ಜಿಲ್ಲೆಗೆ ಸಿಗದ ಅನುದಾನ ಕೊಡಗಿಗೆ ಸಿಕ್ಕಿದೆ. ಬಿಜೆಪಿಗೆ ಕೊಡಗಿನಲ್ಲಿ ವಿರೋಧವೇ ಇಲ್ಲ ಎನ್ನುವುದು ಕಂಡುಬರುತ್ತಿದೆ. ಇದು ಬಿಜೆಪಿ ಮೇಲೆ ಜನರ ವಿಶ್ವಾಸ ತೋರಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net