ಬಿಜೆಪಿ ಸೋಲು ಸಹಿಸದೆ ಟಿವಿ ಒಡೆದ ಕಾರ್ಯಕರ್ತ

BJP, TV, Kolhara, Channapatnam, Shiggamvi, Sandur, By-election, Congress, Virbhadra Bagi, Prime Minister, Narendra Modi,
ಕೊಲ್ಹಾರದಲ್ಲಿ ಬಿಜೆಪಿ ಕಾರ್ಯಕರ್ತ ವೀರಭದ್ರ ಬಾಗಿ ತಮ್ಮ ಮನೆಯಲ್ಲಿದ್ದ ಟಿವಿ ಒಡೆಯಲು ಒಯ್ಯುತ್ತಿರುವುದು.
Published on

ಕೊಲ್ಹಾರ: ರಾಜ್ಯದಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತಿದಂತೆ ಪಟ್ಟಣದ 4ನೇ ವಾರ್ಡ್ ನಿವಾಸಿ, ಬಿಜೆಪಿ ಕಾರ್ಯಕರ್ತ ವೀರಭದ್ರ ಬಾಗಿ ಅವರು ಪಕ್ಷದ ಸೋಲನ್ನು ಸಹಿಸದೆ ಮನೆಯಲ್ಲಿರುವ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣವಾಗಿದೆ. ಇದರಿಂದ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರು ಬಲಿಪಶುವಾಗುವಂತಾಗಿದೆ.

ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿರುವ ಬಿಜೆಪಿ ನಾಯಕರ ಸಭೆ ನಡೆಸಿ ಒಂದುಗೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net