ಭರತಗೆ ಬಿಜೆಪಿ ಟಿಕೆಟ್, ಹೈ ಕಮಾಂಡ್​ಗೆ ಅಭಿನಂದನೆ

20-SVR-2
Published on

ಸವಣೂರ: ಶಿಗ್ಗಾಂವಿ-ಸವಣೂರ ಕ್ಷೇತ್ರದ ಮತದಾರರ ಮನದಾಳದ ಮಾತು ಅರಿತ ಬಿಜೆಪಿ ಹೈಕಮಾಂಡ್ ಉಪ ಚುನಾವಣೆಯಲ್ಲಿ ಭರತ ಬೊಮ್ಮಾಯಿ ಅವರಿಗೆ ಅವಕಾಶ ನೀಡಿರುವ ಹಿನ್ನ್ನೆಲೆಯಲ್ಲಿ ಬಿಜೆಪಿ ಸವಣೂರ ಮಂಡಲ ಸಂತಸ ವ್ಯಕ್ತಪಡಿಸಿದೆ ಎಂದು ಲಿಡ್ಕರ ನಿಗಮ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಎದುರಿಗೆ ಬಿಜೆಪಿ ಸವಣೂರ ಮಂಡಲದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ವರಿಷ್ಠರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿರುವುದು ಕ್ಷೇತ್ರದ ಮತದಾರರಿಗೆ ಸಂತಸವನ್ನುಂಟು ಮಾಡಿದೆ. ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಿತ್ತೆಸೆದ ಬಸವರಾಜ ಬೊಮ್ಮಾಯಿಯವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.
ಬಿಜೆಪಿ ಸವಣೂರ ಮಂಡಳ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪ್ರಧಾನ ಕಾರ್ಯದರ್ಶಿ ಅಶೋಕ ಯಲಿಗಾರ, ಕಾರ್ಯದರ್ಶಿ ಶ್ರೀನಿವಾಸ ಗಿತ್ತೆ, ಪದಾಧಿಕಾರಿಗಳಾದ ಧರಿಯಪ್ಪಗೌಡ ಪಾಟೀಲ, ಬಸನಗೌಡ ಕೊಪ್ಪದ, ಶಿವಪುತ್ರಪ್ಪ ಕಲಕೋಟಿ, ರಮೇಶ ಅರಗೋಳ, ಬಸನಗೌಡ ಪಾಟೀಲ, ಬಿ.ಎಂ. ಪಾಟೀಲ, ಹೊನ್ನಪ್ಪ ಕೊಳ್ಳವರ, ಚನ್ನಬಸಯ್ಯ ದುರ್ಗದಮಠ, ಮಹೇಶ ಮಲಕಣ್ಣವರ, ಚಿದಾನಂದ ಬಡಿಗೇರ, ವಿನಯ ಬುಶೆಟ್ಟಿ, ಶ್ರೀಕಾಂತ ಲಕ್ಷೆ್ಮೕಶ್ವರ, ಶ್ರೀಕಾಂತ ಇಂಗಳಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net