ಬಳ್ಳಾರಿ, ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್

Published on

ಬಳ್ಳಾರಿ : ಸಂಡೂರು ‌ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯ ನಿಷ್ಠಾವಂತ ‌ಕಾರ್ಯಕರ್ತ ಬಂಗಾರು ‌ಹನುಮಂತು ಗೆ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ‌ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಭೂ ಕಬಳಿಕೆ, ಅತ್ಯಚಾರ ಹಾಗೂ ಭ್ರಷ್ಟಾಚಾರ ತುಂಬಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ಮಾತುಗಳನ್ನು ಆಡಿದರು. ಬಿಜೆಪಿ ‌ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಗಟ್ಟಿಯಾಗಲಿದೆ. ಕೆ. ಎಸ್‌. ದಿವಾಕರ್ ಕೂಡ ಪ್ರಬಲ ಅಕಾಂಕ್ಷಿಯಾಗಿದ್ದು, ಟಿಕೆಟ್ ನೀಡಿರುವುದು ಪಕ್ಷದ ತೀರ್ಮಾನವಾಗಿದೆ. ಈಗಿನಿಂದಲೇ ರೆಡ್ಡಿ ಜತೆ ಪ್ರಚಾರಕ್ಕೆ ತೆರಳುವೆ ಎಂದರು. ವಾಲ್ಮೀಕಿ ನಿಗಮದ ಹಗರಣದ 21 ಕೋಟಿ ರೂ. ಲೋಕಸಭಾ ಚುನಾವಣೆ ಬಳಕೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ಶಾಸಕ ಬಿ. ನಾಗೇಂದ್ರ ಗೆ ಜೋಶ್ ಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರನಂತೆ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ ಎಂದು ವಾಗ್ದಳಿ ನಡೆಸಿದರು. ಪ್ರಮುಖರಾದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಮಾಜಿ‌ ಸಚಿವ ಜಿ.‌ ಜನಾರ್ದನರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net