ಸ್ಥಳೀಯ ಸಂಸ್ಥೆ ಚುನಾವಣೆ, ಕರಾವಳಿಯಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ

aaa
Published on

ಮಂಗಳೂರು/ಪಡುಬಿದ್ರಿ
ಕರಾವಳಿಯಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಉಡುಪಿ ಜಿಲ್ಲೆಯ ಕಾಪು ಪುರಸಭೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತವಾಗಿದೆ. ವಿಟ್ಲ ಪಟ್ಟಣ ಪಂಚಾಯಿತಿ ಸದ್ಯ ಬಿಜೆಪಿ ಕಾಂಗ್ರೆಸ್‌ 2-1 ಹೋರಾಟದಲ್ಲಿದ್ದು ಕೆಲ ಗಂಟೆಯಲ್ಲಿ ಫಲಿತಾಂಶ ಹೊರಬೀಳಬಹುದು.
ಈ ಹೊತ್ತಿನ ಬಲಾಬಲ ಈ ಕೆಳಗಿನಂತಿದೆ:
ಕಾಪು ಪುರಸಭೆ
ಬಿಜೆಪಿ- 12
ಕಾಂಗ್ರೆಸ್-7
ಜೆಡಿಎಸ್-1
ಇತರ-3
ವಿಟ್ಲ ಪ.ಪಂ.

ಬಿಜೆಪಿ- 6
ಕಾಂಗ್ರೆಸ್-3
ಇತರ-1

ಕೋಟೆಕಾರು ಪ.ಪಂ.
17 ಸ್ಥಾನಗಳಲ್ಲಿ
ಬಿಜೆಪಿ-11
ಕಾಂಗ್ರೆಸ್-2
ಇತರ-2


ಚುನಾಯಿತ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಸ್ಥಳೀಯ ಸಂಸ್ಥೆಗಳಿಗೆ ಡಿ.೨೭ರಂದು ಮತದಾನ ನಡೆದಿತ್ತು. ಗುರುವಾರ ಬೆಳಗ್ಗೆಯಿಂದ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net