ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು

13 NJD 02
Published on


ನಂಜನಗೂಡು: ತಾಲೂಕಿನ ಸಿಂಧುವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಲಿಯಯ್ಯ 151 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಜವರಯ್ಯ 79 ಮತ ಪಡೆದರು.


ಇನ್ನುಳಿದ 10 ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಬಿಜೆಪಿ ಬೆಂಬಲಿತ ಎಸ್.ಎಂ.ಕೆಂಪಣ್ಣ, ಶಾಂತಪ್ಪ, ಜಯಶಂಕರಪ್ಪ, ಪಾಪರಾವ್, ಸುರೇಂದ್ರರಾಜೇಅರಸು, ಶಿವನಾಗಪ್ಪ, ವೆಂಕಟಸ್ವಾಮೇಗೌಡ, ಸೋಮನಾಯಕ, ಮಾಲತಿ, ಚಂದ್ರಮ್ಮ ಆಯ್ಕೆ ಆಗಿದ್ದಾರೆ. ಈ ಸದಸ್ಯರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪಣ್ಣ ತಂಡದ ಬೆಂಬಲಿತರಾಗಿದ್ದಾರೆ. ಮುಖಂಡರಾದ ಎಸ್.ಎಂ.ಕೆಂಪಣ್ಣ, ಶಾಂತಪ್ಪ, ಜಯಶಂಕರಪ್ಪ,ಪಾಪರಾವ್, ಸುರೇಂದ್ರರಾಜೇಅರಸ್, ಶಿವನಾಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net