ಬಿಜೆಪಿ ಬೆಂಬಲಿತೆ ತಾಪಂ ಅಧ್ಯಕ್ಷೆ

27blh1-Web
ಬೈಲಹೊಂಗಲ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪಾರ್ವತಿ ಸಂಗಪ್ಪ ನರೇಂದ್ರ ಆಯ್ಕೆಯಾದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ತಾಪಂ ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ಸದಸ್ಯರಾದ ಬಸನಗೌಡ ಪಾಟೀಲ, ಶ್ರೀಶೈಲ ಕಮತಗಿ, ಉಮೇಶಗೌಡ ಪಾಟೀಲ, ನೀಲವ್ವ ಫಕೀರಣ್ಣವರ, ಗಂಗವ್ವ ಸುಣಗಾರ, ಶೋಭಾ ಪಾಟೀಲ, ಅಮೃತಾ ಕಕ್ಕಯ್ಯನ್ನವರ, ಗೌರವ್ವ ಕುರಬರ ಇತರರು ಇದ್ದರು.
Published on

ಬೈಲಹೊಂಗಲ: ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬುಡರಕಟ್ಟಿ ಮತಕೇತ್ರದ ಪಾರ್ವತಿ ಸಂಗಪ್ಪ ನರೇಂದ್ರ ಲಾಟರಿ ಮೂಲಕ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದರು. ತಾಪಂನ ಒಟ್ಟು 22 ಸದಸ್ಯರಲ್ಲಿ 10 ಬಿಜೆಪಿ, 2 ಪಕ್ಷೇತರ, ಕಾಂಗ್ರೆಸ್ 8, ಜೆಡಿಎಸ್ 2 ಸದಸ್ಯರಿದ್ದರು. ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಸುತಗಟ್ಟಿ ಸದಸ್ಯೆ ಸುಜಾತಾ ಬಸವರಾಜ ಬಾಳ್ಳಿಗಟ್ಟಿ ಕೂಡ ನಾಮಪತ್ರ ಸಲ್ಲಿಸಿದ್ದರು.

ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲಿಸಿದರು. ಓರ್ವ ಬಿಜೆಪಿ ಸದಸ್ಯ ಕಾಂಗ್ರೆಸ್ ಗುಂಪಿಗೆ ಬೆಂಬಲಿಸಿದ್ದರಿಂದ ತಲಾ 11 ಅಭ್ಯರ್ಥಿಗಳಿಂದ ಮತದಾನ ನಡೆದು ಸಮಬಲವಾಗಿತ್ತು. ಚುನಾವಣೆ ಅಧಿಕಾರಿ ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಸಿದಾಗ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಬುಡರಕಟ್ಟಿ ಕೇತ್ರದ ಪಾರ್ವತಿ ಸಂಗಪ್ಪ ನರೇಂದ್ರ ಅವರಿಗೆ ಅದೃಷ್ಟ ಒಲಿಯಿತು. ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಚುನಾವಣೆ ಜರುಗಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪಾರ್ವತಿ ಅವರನ್ನು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಸತ್ಕರಿಸಿದರು.

ತಾಪಂ ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ಬಸನಗೌಡ ಪಾಟೀಲ, ಶ್ರೀಶೈಲ ಕಮತಗಿ, ಉಮೇಶಗೌಡ ಪಾಟೀಲ, ನೀಲವ್ವ ಫಕೀರಣ್ಣವರ, ಗಂಗವ್ವ ಸುಣಗಾರ, ಶೋಭಾ ಪಾಟೀಲ, ಅಮೃತಾ ಕಕ್ಕಯ್ಯನ್ನವರ, ಗೌರವ್ವ ಕುರಬರ, ಬಸಪ್ಪ ಹರಿಜನ, ಶ್ರೀಕರ ಕುಲಕರ್ಣಿ, ಬಿ.ಎಫ್.ಕೊಳದೂರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಸಿ.ಎಸ್.ಮೊಕಾಶಿ, ಬಸವರಾಜ ಪುಟ್ಟಿ, ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ ಇದ್ದರು. ಚುನಾವಣಾಧಿಕಾರಿಯಾಗಿ ಶಿವಾನಂದ ಭಜಂತ್ರಿ, ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ತಾಪಂ ಇಒ ಸುಭಾಷ ಸಂಪಗಾಂವಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net