

ಸುಳ್ಯ: ತೈಲ ಬೆಲೆ ಏರಿಕೆಯಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಜನರು ಜೀವನ ನಡೆಸಲು ಕಷ್ಟಪಡುವಂತಾಗಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಎಚ್ಚರಿಕೆ ನೀಡಿದರು.
ತೈಲ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಟ್ಟಿ ಭಾಗ್ಯದ ಕಾರಣ ಸರ್ಕಾರದ ಖಜಾನೆ ಬರಿದಾಗಿದ್ದು ಇದೀಗ ಜನರ ಜೇಬಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಮುಖಂಡರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಆಶಾ ತಿಮ್ಮಪ್ಪ, ಸುಬೋದ್ ಶೆಟ್ಟಿ ಮೇನಾಲ, ಎ.ಟಿ.ಕುಸುಮಾಧರ, ಸುರೇಶ್ ಕಣೆಮರಡ್ಕ, ವಿಕ್ರಂ ಎ.ವಿ, ಚನಿಯ ಕಲ್ತಡ್ಕ, ಆರ್.ಕೆ.ಭಟ್ ಕುರುಂಬಡೇಲು, ಪ್ರದೀಪ್ ಕೊಲ್ಲರಮೂಲೆ, ಪುಲಸ್ಯರೈ, ಇಂದಿರಾ ಬಿ.ಕೆ, ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ತೇಜಸ್ವಿನಿ ಕಟ್ಟಪುಣಿ, ಶಂಕರ ಪೆರಾಜೆ, ಭಾರತಿ ಉಳುವಾರು, ಜಯರಾಮ ರೈ ಜಾಲ್ಸೂರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿದರು. ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ವಂದಿಸಿದರು.
ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇದೀಗ ಪೆಟ್ರೋಲ್-ಡೀಸೆಲ್ ದರ ಏರಿಸಿ ಜನ ಸಾಮಾನ್ಯರ ಬದುಕಿಗೆ ಬರೆ ಎಳೆದಿದ್ದಾರೆ. ವೆಂಕಟ್ ವಳಲಂಬೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ https://www.vijayavani.net/juvenile-kills-aunt-after-attempting-to-rape-her https://www.vijayavani.net/district-gamaka-art-conference-on-13th-july