

ಕಲಬುರಗಿ: ಬಡವರ ವಿರೋಧಿ ಬೆಲೆ ಏರಿಕೆ ನೀತಿ ಖಂಡಿಸಿ, ಮುಸ್ಲಿಮರಿಗೆ ಶೇ.೪ ಮೀಸಲಾತಿ ವಿರೋಧಿಸಿ, ದಲಿತರ ಹಣ ದರ‍್ಬಳಕೆ ಖಂಡನೆ ಸೇರಿ ರಾಜ್ಯ ರ‍್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪದಿಂದ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯೂ ಏ.೧೮ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯ ಅಶೋಕ ಬಗಲಿ ತಿಳಿಸಿದರು.
ಏ.೧೭ರಂದು ಪದ ನಾಯಕರು ನಗರಕ್ಕೆ ಆಗಮಿಸಲಿದ್ದು, ವಾಸ್ತವ್ಯ ಹೂಡಲಿದ್ದಾರೆ. ಏ.೧೮ರಂದು ಬೆಳಗ್ಗೆ ೧೦ಕ್ಕೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿ, ಡಿಸಿ ಕಚೇರಿ ಎದುರು ತೆರೆದ ವಾಹನದ ವೇದಿಕೆಯಲ್ಲಿ ಸಮಾವೇಶ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ರಾಜ್ಯಾಧ್ಯ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪ ನಾಯಕ ಆರ್.ಅಶೋಕ, ಪರಿಷತ್ ಪ್ರತಿಪ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಕರ‍್ಯರ‍್ಶಿ ಪಿ.ರಾಜೀವ್, ಎಂಎಲ್ಸಿಗಳಾದ ಎನ್.ರವಿಕುಮಾರ, ಕೆ.ಎಸ್.ನವೀನ್ ಸೇರಿದಂತೆ ಪದ ನಾಯಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ರ‍್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿನ ದರ ಮೂರು ಬಾರಿ ಏರಿಸಲಾಗಿದೆ. ವಿದ್ಯುತ್ ದರ ಯೂನಿಟ್ಗೆ ೩೬ ಪೈಸೆ ಹೆಚ್ಚಿಸಿದ್ದು, ನೋಂದಣಿ ಶುಲ್ಕ, ಡಿಸೇಲ್ ದರ, ಸ್ಟಾಂಪ್ ಶುಲ್ಕ, ಹೊರ ರೋಗಿ ನೋಂದಣಿ ಶುಲ್ಕ, ಮರಣೋತ್ತರ, ವೈದ್ಯಕಿಯ ಪ್ರಮಾಣ ಪತ್ರ ಶುಲ್ಕ, ದಾಖಲಾತಿ ಶುಲ್ಕ, ದತ್ತು ಸ್ವೀಕಾರ, ಲ್ಯಾಬ್ ಪರೀಾ ಶುಲ್ಕ, ಕ್ಯಾನ್ಸಲೇಶನ್ ಡೀಡ್, ಅಡಮಾನ ಪತ್ರ ಶುಲ್ಕ ಸೇರಿ ಎಲ್ಲ ಬೆಲೆಗಳನ್ನು ಏರಿಸಿದ್ದು, ರಾಜ್ಯ ರ‍್ಕಾರ ಕೂಡಲೇ ತನ್ನ ನರ‍್ಧಾರವನ್ನು ವಾಪಸ್ ಪಡೆಯಬೇಕು ಎಂದು ಅಶೋಕ ಬಗಲಿ ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಓಬಿಸಿ ಮರ‍್ಚಾ ರಾಜ್ಯ ಕರ‍್ಯರ‍್ಶಿ ಅವ್ವಣ್ಣ ಮ್ಯಾಕೇರಿ, ಸಂತೋಷ ಹಾದಿಮನಿ ಇದ್ದರು.