ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

BJP Protest new
Published on

ಹುಬ್ಬಳ್ಳಿ : ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ಪೂಜಾ ಶೇಜವಾಡಕರ ನೇತೃತ್ವದಲ್ಲಿ ಇಲ್ಲಿನ ಸಿಬಿಟಿ ಬಳಿ ಪ್ರತಿಭಟನೆ ನಡೆಸಿದ ನೂರಾರು ಮಹಿಳೆಯರು, ಚುನಾವಣೆ ಸಂದರ್ಭದಲ್ಲಿ 200 ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ಆ ಮೂಲಕ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆ ಮಾಡಿದೆ ಎಂದು ದೂರಿದರು.

ರಾಜ್ಯ ಸರ್ಕಾರದ ಈ ನಡೆ ಮೋಸದಿಂದ ಕೂಡಿದೆ. ತಕ್ಷಣ ವಿದ್ಯುತ್ ದರ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಕುಂತಲಾ ಪಾಠಕ, ಸಂಧ್ಯಾ ಸರಾಫ, ರಾಣಿ ಪಾಠಕ, ಸನ್ನಿಧಿ ಬಂದಿಷ್ಟಿ, ಉಮಾ ಬಾರ್ಲೆನಿ, ಗೀತಾ ಪಾಲನಕರ, ಪ್ರೇಮಾ ಶೇಟ್, ಶ್ಯಾಮಲಾ ಮಂಚಾಲಿ, ಸತೀಶ ಶೇಜವಾಡಕರ, ಶಿವು ಅಣ್ವೇಕರ, ರೋಹಿತ ಹುದ್ದಾರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net