ನಿತೀಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

bjp new
Published on

ಹುಬ್ಬಳ್ಳಿ : ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿಧಾನಸಭೆ ಅಧಿವೇಶನದಲ್ಲಿ ಮಹಿಳೆಯರ ಕುರಿತು ನೀಡಿದ್ದ ಅಸಂಬದ್ಧ ಹೇಳಿಕೆ ಖಂಡಿಸಿ ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಕಚೇರಿ ಎದುರು ಪಕ್ಷದ ಕಾರ್ಯಕರ್ತೆಯರು ಗುರುವಾರ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯ್್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ನಿತೀಶಕುಮಾರ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್​ಸಿ ಹೇಮಲತಾ ನಾಯ್್ಕ ದೇಶದಲ್ಲಿ ಮಹಿಳೆಯರು ಉನ್ನತ ಸ್ಥಾನಗಳಲ್ಲಿದ್ದಾರೆ. ಮಹಿಳೆಯರಿಗೆ ವಿಷೇಶ ಗೌರವ ಇದೆ. ಭಾರತ ಮಾತಾ ಕೀ ಜೈ ಎಂದು ಘೊಷಣೆ ಕೂಗುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ ಶೇ. 50 ಮಿಸಲಾತಿ ಘೊಷಣೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿತೀಶಕುಮಾರ ದೇಶದ ಮಹಿಳೆಯರಿಗೆ ಅವಮಾನಿಸಿದ್ದು ಖಂಡನೀಯ ಎಂದರು.

ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವಕ್ತಾರ ರವಿ ನಾಯಕ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಮೇನಕಾ ಹುರಳಿ, ಸೀಮಾ ಲದ್ವಾ, ಅನುರಾಧಾ ಚಿಲ್ಲಾಳ, ಅಕ್ಕಮ್ಮಾ ಹೆಗಡೆ, ಸಂಗೀತಾ ಬದ್ದಿ, ಸುಮಾ ಶಿವನಗೌಡ್ರ, ನಾಗರತ್ನಾ ಬಳ್ಳಾರಿ, ಸ್ವಪ್ನಾ ಶಿಂಧೆ, ಸವಿತಾ ಅಥಣಿ, ರೂಪಾ ಬೋಂಗಳೆ, ಗೀತಾ ಮುದ್ದಿ, ಇಂದುಮತಿ ಚವ್ಹಾಣ, ಪೂನಂ ಇಂದೂರ, ಪೂಜಾ ಬೊಮ್ಮನಹಳ್ಳಿ, ಆರತಿ ಬಳ್ಳಾರಿ, ಮೇಘಾ ರೇವಣಕರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net