ಹುಲಿಯಾ ಕಾಡಿಗೆ, ಬಂಡೆ ಛಿದ್ರ

siddaramaiah
Published on

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಹುಲಿಯಾ ಕಾಡಿಗೆ ಹೋಗಲಿದ್ದು, ಬಂಡೆ‌ ಛಿದ್ರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಪಕ್ಷದ ನಗರ ಕಚೇರಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆಯಿದ್ದರೆ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಒಳಜಗಳವಿದೆ ಎಂದರು.

ಮಾಹಿತಿ ಕೊಡಬೇಡಿ
ಆರ್ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮನೆ ಮಬೆಗೆ ತೆರಳಿ ವೋಟರ್ ಐಡಿ, ನಂಬರ್ ಸಂಗ್ರಹಿಸುತ್ತಿದ್ಸು, ಏಕೆ ಎಂದು ತಿಳಿಯದು. ಈ ಬಗ್ಗೆ ಯಾರೊಂದಿಗೂ ಜನರು ಮಾಹಿತಿ ಹಂಚಿಕೊಳ್ಳಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದರು.

ಹುನ್ನಾರ
ಶಾಂತಿಯುತ, ನ್ಯಾಯಸಮ್ಮತ ಮತದಾನವನ್ನು ಬಿಜೆಪಿ ಬಯಸುತ್ತದೆ. ಆದರೆ ಕಾಂಗ್ರೆಸ್ ನವರು ಹೊರಗಿನಿಂದ ಸಾವಿರಾರು ಜನರನ್ನು ಕರೆ ತಂದು ಗಲಭೆ ಸೃಷ್ಟಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಹುನ್ನಾರ ಹೂಡಿದೆ ಎಂದು ಪಕ್ಷದ ಅಭ್ಯರ್ಥಿ ಮುನಿರತ್ನ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net