

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮಸ್ಥಳ ಪ್ರಕರಣ ಸಂಬ0ಧ ಎಸ್‌ಐಟಿ ನಡೆಯುತ್ತಿದೆ. ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದ ಬಿಜೆಪಿಯವರು ಈಗ ಅದರ ವಿರುದ್ಧ ಮಾತನಾಡುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯವರು ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನವಲಗುಂದ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಅಲ್ಲಿಯವರಗೆ ಕಾಯಬೇಕು. ಎಸ್‌ಐಟಿ ತನಿಖೆ ಆಗಬೇಕು ಎಂಬ ಬಿಜೆಪಿಯವರ ಒತ್ತಾಯ ಮತ್ತು ನ್ಯಾಯಾಲಯದ ಆದೇಶದಂತೆ ಎಸ್‌ಐಟಿ ರಚಿಸಲಾಗಿದೆ. ಮಾಸ್ಕ್ ಮ್ಯಾನ್ ಹೇಳಿದ ಕಡೆಗಳಲ್ಲಿ ಗುಂಡಿ ತೋಡಲಾಗಿದೆ. 2- 3 ವಾರ ಕಳೆದರೂ ಮೃತದೇಹಗಳು ಸಿಗಲಿಲ್ಲ. ಅಕಸ್ಮಾತ್ ಹೆಣಗಳು ಸಿಕ್ಕಿದ್ದರೆ ಬಿಜೆಪಿಯವರು ಏನು ಹೇಳುತ್ತಿದ್ದರು? ಷಡ್ಯಂತ್ರ ಇದೆ ಎನ್ನುವುದು ಎಸ್‌ಐಟಿ ತನಿಖೆಯ ನಂತರ ಗೊತ್ತಾಗಲಿದೆ. ಇದರಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಲಾಡ್ ತಿಳಿಸಿದರು.