ಜೋಶಿ ಬದಲು ಶ್ರೀಕಾಂತಗೆ ಬಿಜೆಪಿ ಟಿಕೆಟ್ ಕೊಡಲಿ

h4-pujar ticket
Published on

ಹುಬ್ಬಳ್ಳಿ: ಶ್ರೀಕಾಂತ ಪೂಜಾರ ಅವರ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿಯಾಯಿತು. ಈಗ ಕಾಂಗ್ರೆಸ್ ಹೊಸ ಅಭಿಯಾನ ಶುರುವಿಟ್ಟುಕೊಂಡಿದೆ. ಅದೇನೆಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ ಬದಲು ಶ್ರೀಕಾಂತ ಪೂಜಾರ ಅವರಿಗೆ ಬಿಜೆಪಿ ಟಿಕೆಟ್ ನೀಡಲಿ ಎಂಬುದು !
ಕಳ್ಳಬಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ ಪೂಜಾರ 16 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡ ಪೂರೈಸಿ, ಅರ್ಹತೆ ಪಡೆದಿದ್ದಾನೆ. ಈತನ ಮೇಲೆ ಬಿಜೆಪಿಗೆ ಪ್ರೀತಿ-ಕಾಳಜಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಲಿ. ಹೊಸ ಪ್ರತಿಭೆಯನ್ನು ಕ್ಷೇತ್ರಕ್ಕೆ ಪರಿಚಯಿಸಲಿ ಎಂದಿರುವ ಪ್ರೋಮೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಬಿಜೆಪಿಗೆ ಇರಿಸುವಮುರಿಸು ತಂದರೆ, ಕಾಂಗ್ರೆಸ್‌ಗೆ ಹುಗ್ಗಿಯಷ್ಟೇ ಸವಿ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net