ಬಿಜೆಪಿಯಿಂದ ಅನಗತ್ಯ ಟೀಕೆ

basanagouda
Published on

ಮಸ್ಕಿ: ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಗೆ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಮೂಲಕ ಶಾಸಕ ಬಸನಗೌಡ ತುರ್ವಿಹಾಳ ಭಾನುವಾರ ಚಾಲನೆ ನೀಡಿದರು.

ಭರವಸೆ ಈಡೇರಿಸಲು ಬದ್ಧ

ಚುನಾವಣೆ ಮುಗಿದು ಒಂದು ತಿಂಗಳಾಗಿಲ್ಲ. ಆದರೂ, ಬಿಜೆಪಿಯವರು ಅನಗತ್ಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗುವುದು. ಕಾಂಗ್ರೆಸ್ ನುಡಿದಂತೆ ನಡೆಯಲಿದೆ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು. ತಹಸೀಲ್ದಾರ ಸುಧಾ ಅರಮನೆ, ತಾಪಂ ಇಒ ಪವನಕುಮಾರ, ಮಸ್ಕಿ ಡಿಪೋ ಮ್ಯಾನೇಜರ್ ಆದಪ್ಪ ಕುಂಬಾರ, ಸಿಪಿಐ ಸಂಜೀವ ಬಳಿಗಾರ ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಗಚ್ಚಿನಮಠದ ಮುಂಭಾಗದಿಂದ ಪೂರ್ಣಕುಂಭದೊಂದಿಗೆ ಹೊಸ್ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ಶಾಸಕ ಬಸನಗೌಡ ತುರ್ವಿಹಾಳ, ಜಿಪಂ ಮಾಜಿ ಅಧ್ಯಕ್ಷರಾದ ಶ್ರೀಶೈಲಪ್ಪ ಬ್ಯಾಳಿ, ಗುಂಡಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಚಿಗರಿ, ಪ್ರಮುಖರಾದ ವೆಂಕಟರಡ್ಡಿ ಹಾಲಾಪುರ, ಸೂಗಪ್ಪ ಮರಳದ, ಆದನಗೌಡ ಸಂತೆಕೆಲ್ಲೂರು, ಸಿದ್ದನಗೌಡ ಮಾಟೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net