

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ವರೆಗೆ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳುವ ಸಲುವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಕಾರ್ಯಾಗಾರ ಏರ್ಪಡಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾರ್ಯಾಗಾರದ ಸಮಗ್ರ ಮಾಹಿತಿ ನೀಡಿದರು. ಸ್ವಚ್ಚತಾ ಅಭಿಯಾನ, ಏಕ್ ಪೇಡ್ ಮಾ ಕೆ ನಾಮ್, ರಕ್ತದಾನ, ಉಚಿತ ಆರೋಗ್ಯ ಶಿಬಿರ, ಮಕ್ಕಳಿಗೆ ಕ್ರೀಡೆ ಆಯೋಜಿಸುವುದು, ಚಿತ್ರಕಲೆ ಸ್ಪರ್ಧೆ, ಓಕಲ್ ಫಾರ್ ಲೋಕಲ್ ಅಭಿಯಾನ ಆಯೋಜಿಸಲು ನಿರ್ಣಯಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಮನ್ ಕೀ ಬಾತ್ ವೀಕ್ಷಣೆಯಲ್ಲಿ ಜಿಲ್ಲೆಯ ಮಂಡಳಗಳು ಅತೀ ಹೆಚ್ಚಿನ ವೀಕ್ಷಣೆ ಮಾಡಿ ಮಹಾನಗರಕ್ಕೆ ಗೌರವ ತಂದಿದ್ದಕ್ಕಾಗಿ ಹಾಗೂ ಧರ್ಮಸ್ಥಳ ಚಲೋ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ನಾರಾಯಣ ಜರತಾರಘರ ಮಾತನಾಡಿ, ಅಕ್ಟೋಬರ್ 5ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷ ತುಂಬುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಬಸವರಾಜ ಗರಗ, ಮಾಜಿ ಶಾಸಕ ಅಶೋಕ ಕಾಟವೆ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ರಂಗಾ ಬದ್ದಿ, ಲಕ್ಷ್ಮಣ ಬೀಳಗಿ, ಈಶ್ವರಗೌಡ ಪಾಟೀಲ್, ರಾಜು ಕಾಳೆ, ಮಂಜುನಾಥ ಕಾಟಕರ, ಮಂಜುನಾಥ ಮಲ್ಲಿಗವಾಡ, ಶಂಕರ ಎಸ್, ಲೀಲಾವತಿ ಪಾಸ್ತೆ, ಕಾರ್ಯಕರ್ತರು ಉಪಸ್ಥಿತರಿದ್ದರು.