ಬಿಜೆಪಿಯಿಂದ ನಿಸ್ವಾರ್ಥ ದೇಶ ಸೇವೆ

06 Sirwar 4
Published on

ಸಿರವಾರ: ಕಳೆದ ಎರಡು ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲು ಶ್ರಮಿಸಬೇಕಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜೆ.ದೇವರಾಜಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ 44ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಮಾತೆ, ಜನಸಂಘದ ಪ್ರಮುಖರಾದ ಪಂ.ದೀನದಯಾಳ್ ಉಪಾಧ್ಯಾಯ, ಶ್ಯಾಮಾಪ್ರಸಾದ್ ಮುಖರ್ಜಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಶನಿವಾರ ಮಾತನಾಡಿದರು. ನಿಸ್ವಾರ್ಥ ದೇಶ ಸೇವೆಗಾಗಿ ಬಿಜೆಪಿ ಸ್ಥಾಪನೆಯಾಗಿದೆ. ನಾವೆಲ್ಲರೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ತರುವುದಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಸಿರವಾರ ಮಂಡಲದ ವಿವಿಧ ಮೋರ್ಚಾಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು. ಪ್ರಮುಖರಾದ ಸುರೇಶ, ಅಜಿತ ಕುಮಾರ ಹೊನ್ನಟಗಿ, ಯಲ್ಲಗೌಡ ಗಣದಿನ್ನಿ, ಸಿದ್ದರಾಮಯ್ಯ ತಾತ, ರಾಮಯ್ಯ ಬೈನೇರ್, ವಾಹಿದ್, ಶರಣಗೌಡ ಶಾಖಾಪೂರ, ಬಸವರಾಜ ಚಾಗಭಾವಿ, ವಿನಯಕುಮಾರ, ಮಲ್ಲಪ್ಪ ದೊಡ್ಡಮನಿ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net