ಸಂವಿಧಾನ, ಅಂಬೇಡ್ಕರ್ ವಿರೋಧಿ ಕಾಂಗ್ರೆಸ್

2401Klb04
Published on

ಕಲಬುರಗಿ: ಜಾತಿ ಆಧಾರಿತ ಮೀಸಲು ವಿರೋಧಿಸಿದ ನೆಹರು ಪ್ರಣಿತ ಕಾಂಗ್ರೆಸ್ಸಿಗರು ದೇಶದ ಸ್ವಾತಂತ್ರÈದ ಆರಂಭದಿAದಲೂ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅಗೌರವ ತರುತ್ತಲೇ ಇದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟಿçÃಯ ಅಧ್ಯಕ್ಷ ಕೆ.ಲಕ್ಷö್ಮಣ ಹೇಳಿದರು. ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಭಾರತೀಯ ಜನತಾ ಪಕ್ಷದಿಂದ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಕುಟುಂಬ ಅಧಿಕಾರದಲ್ಲಿ ಇರಲು ಪದೇ ಪದೆ ಸಂವಿಧಾನ ತಿದ್ದುಪಡಿ ಮಾಡಿದರು. ಮೇದಾವಿ, ಬುದ್ಧಿಜೀವಿ ಅಂಬೇಡ್ಕರ್‌ನ್ನು ಅಧಿಕಾರದಿಂದ ದೂರ ಇಟ್ಟಿದ್ದು, ನೆಹರು. ಅದನ್ನೇ ಇಂದು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನೆಹರು, ಇಂದಿರಾಗಾAಧಿ ಜೀವಂತವಿದ್ದಾಗಲೇ ಭಾರತ ರತ್ನ ಕೊಟ್ಟುಕೊಂಡರು. ಆದರೆ ಅಂಬೇಡ್ಕರ್‌ಗೆ ಬಿಜೆಪಿ ಬೆಂಬಲಿತ ಸರ್ಕಾರ ಭಾರತ ರತ್ನ ನೀಡಿತು. ಸಂಸತ್ತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸದೆ ಅವಮಾನಿಸಿದ್ದು, ಕಾಂಗ್ರೆಸ್ಸಿಗರು. ಅಕ್ರಮದಿಂದ ಗೆದ್ದ ಸಂಸದ ಸ್ಥಾನ ರದ್ದು ಮಾಡಿದ್ದಕ್ಕೆ ಪ್ರಜಾಸತಾತ್ಮಕ ವಿರೋಧಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನು ಜೈಲು ಮಾಡಿದ ನಿರಂಕುಶವಾದಿಗಳು ಕಾಂಗ್ರೆಸ್ಸಿಗರು. ಇಂದಿಗೂ ಅವರ ಕೈಗೆ ಅಧಿಕಾರ ಹೋದರೆ ಅದನ್ನೇ ಮುಂದುವರಿಸುತ್ತಾರೆ ಎಂದರು. ಜಾತಿ ಮೀಸಲು ವಿರೋಧಿಸಲು ನೆಹರು ಪತ್ರ: ಸಂವಿಧಾನ ರಚನೆ ವೇಳೆ ದೇಶದ ದೀನ, ದಲಿತರಿಗೆ ಜಾತಿ ಆಧಾರಿತ ಮೀಸಲು ನೀಡುವುದಕ್ಕೆ ಅಂಬೇಡ್ಕರ್ ವಾದಿಸಿದ್ದರು. ಆದರೆ ಅಂದಿನ ನೆಹರು ಅದನ್ನು ವಿರೋಧಿಸಿ, ಆರ್ಥಿಕತೆ ಆಧಾರಿತ ಮೀಸಲು ಎಂದಿದ್ದರು. ದೇಶದ ಎಲ್ಲ ಸಿಎಂಗಳಿಗೆ ಪತ್ರ ಬರೆದು, ಜಾತಿ ಆಧಾರಿತ ಮೀಸಲಿಗೆ ವಿರೋಧಿಸುವಂತೆ ಕೋರಿದ್ದ ದಾಖಲೆ ಇದೆ. ಮುಸ್ಲಿಂ ತುಷ್ಟಿçÃಕರಣಕ್ಕಾಗಿ ಜಮ್ಮು ಕಾಶ್ಮೀರಕ್ಕೆ ೩೭೦ ವಿಶೇಷ ಸ್ಥಾನ ನೀಡಿದ್ದರು. ಅದನ್ನು ವಿರೋಧಿಸಿದ ಅಂಬೇಡ್ಕರ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದರು. ತುರ್ತು ಪರಿಸ್ಥಿತಿ ನಂತರ ಬಾಬು ಜಗಜೀವನರಾಂ ಪ್ರಧಾನಿ ಆಗುವುದು ತಡೆಯಲು ವ್ಯವಸ್ಥಿತವಾಗಿ ಕಾಂಗ್ರೆಸ್‌ನಿAದಲೇ ಸೋಲಿಸಲಾಯಿತು. ಆದರೆ ಬಿಜೆಪಿ ದಲಿತರಾದ ರಾಮನಾಥ ಕೋವಿಂದ, ಆದಿವಾಸಿ ದ್ರೌಪದಿ ಮುರ್ಮು, ಅಲ್ಪಸಂಖ್ಯಾತ ಅಬ್ದುಲ್ ಕಲಾಂ ಅವರನ್ನು ರಾಷ್ಟçಪತಿ ಮಾಡಿತು ಎಂದು ಕೆ.ಲಕ್ಷö್ಮಣ ಹೇಳಿದರು. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ ಮಾತನಾಡಿದರು. ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರz್ದೆÃವಾಡಗಿ, ನಗರಾಧ್ಯಕ್ಷ ಚಂದು ಪಾಟೀಲï, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ್ ತೇಲ್ಕೂರ, ಬಾಬುರಾವ ಚವ್ಹಾಣ್, ನಿತೀನ್ ಗುತ್ತೇದಾರ, ವಿಶಾಲ ದರ್ಗಿ, ಶರಣಪ್ಪ ತಳವಾರ, ದಯಾಘನ್ ಧಾರವಾಡಕರ, ಶಿವಯೋಗಿ ನಾಗನಳ್ಳಿ, ಸಂತೋಷ ಹಾದಿಮನಿ, ಭಾಗೀರಥಿ ಗುನ್ನಾಪುರ, ಶಶಿಕಲಾ ಟೆಂಗಳಿ, ಧರ್ಮಣ್ಣ ಇಟಗಾ ಇತರರಿದ್ದರು. ಅಂಬಾರಾಯ ಅಷ್ಟಗಿ ಸ್ವಾಗತಿಸಿದರು.

ಅಸಮಾನತೆ, ಮೇಲು, ಕೀಳು ಇರುವವರೆಗೆ ಮೀಸಲಾತಿ ಇರಲಿದೆ ಎಂಬುದು ಬಿಜೆಪಿ ಧ್ಯೇಯ. ಆದರೆ ಸುಳ್ಳು ಹರಡುತ್ತಿರುವ ಮೀಸಲು ವಿರೋಧಿಸಿದ್ದ ಕಾಂಗ್ರೆಸ್ಸಿಗರು ತಪ್ಪು ಸಂದೇಶ ನೀಡುತ್ತಿದ್ದಾರೆ. ಅಟ್ರಾಸಿಟಿ ಕಾಯ್ದೆ ಬಲಪಡಿಸಿದ್ದು, ಓಬಿಸಿಯವರಿಗೆ ನೀಟ್, ಕೇಂದ್ರದ ಶಿಕ್ಷಣ ಸಂಸ್ಥೆಗಳಲ್ಲಿ ಶೇ.೧೭ ಮೀಸಲು ನೀಡಿದ್ದು ಮೋದಿ. ಮೋದಿ ಅಧಿಕಾರದಲ್ಲೇ ಜಮ್ಮು ಕಾಶ್ಮೀರ ದಲಿತರಿಗೆ ಮೀಸಲು ಸಿಕ್ಕಿದ್ದು. ದೇಶ ಹಿತದ ಒಂದು ದೇಶ ಒಂದು ಚುನಾವಣೆ ಜಾರಿ ಮಾಡುವ ಗುರಿ ಇದೆ. | ಕೆ.ಲಕ್ಷö್ಮಣ, ರಾಷ್ಟಾçಧ್ಯಕ್ಷ ಬಿಜೆಪಿ ಓಬಿಸಿ ಮೋರ್ಚಾ

  • ಎನ್.ಮಹೇಶ ಭಾಷಣದ ತಿರುಳು... ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಹೋಗದಂತೆ ತಡೆದಿದ್ದು ನೆಹರು ಪಟ್ಟು ಬಿಡದ ಅಂಬೇಡ್ಕರ್ ಗೆದಿದ್ದ ಹಿಂದು ಬಾಹುಳ್ಯದ ಕ್ಷೇತ್ರ ಪಾಕ್‌ಗೆ ನೀಡಿದ್ದು ಕಾಂಗ್ರೆಸ್ ನ.೨೬ರಂದು ಕಾನೂನು ದಿನವೆಂದು ಸತ್ಯ ಮುಚ್ಚಿಟ್ಟಿದ್ದು ಕಾಂಗ್ರೆಸ್ ನ.೨೬ರಂದು ಸಂವಿಧಾನ ದಿನವೆಂದು ಆಚರಿಸಿ, ಜಾಗೃತಿಗೆ ಆರಂಭಿಸಿದ್ದು ಮೋದಿ ೨೦೧೦ರಲ್ಲೇ ಗುಜರಾತ್ ಸಿಎಂ ಆಗಿದ್ದಾಗ ಸಂವಿಧಾನ ಸಮ್ಮಾನ್ ಆರಂಭಿಸಿದ್ದು ಮೋದಿ ಅಂಬೇಡ್ಕರ್ ಲೋಕಸಭೆಗೆ ಹೋಗದಂತೆ ಪ್ರಚಾರ ಮಾಡಿ ಸೋಲಿಸಿದ್ದು ನೆಹರು ಅಂಬೇಡ್ಕರ್ ಸೋತ್ತಿದ್ದು ೧೪ ಸಾವಿರ ಮತದಿಂದ, ಕುಲಗೆಟ್ಟ ಮತಗಳು ೭೪ ಸಾವಿರ ಅದು ಹೇಗೆ? ೧೯೫೨ ಚುನಾವಣೆ ನಂತರ ಎಡ್ವಿನಾಗೆ ನೆಹರು ಬರೆದ ಪತ್ರದಲ್ಲಿ ಅಂಬೇಡ್ಕರ್ ಸೋತ್ರು ಎಂದು ಸಂಭ್ರಮಿಸಿದ್ದು ಏಕೆ? ಆರೋಗ್ಯದಿಂದಿದ್ದ ಅಂಬೇಡ್ಕರ್ ೬೫ನೇ ವರ್ಷಕ್ಕೆ ನಿಧನಕ್ಕೆ ಕಾಂಗ್ರೆಸ್ಸಿಗರು ನೀಡಿದ ಕಿರುಕುಳ, ಒತ್ತಡ ಕಾರಣ ನಿಧನರಾದಾಗ ದೆಹಲಿಯಲ್ಲಿ ಒಂದಿಚು ಸ್ಥಳ ನೀಡದೆ ಅಸ್ಪÊಶ್ಯತೆ ಆಚರಿಸಿದ್ದು ಕಾಂಗ್ರೆಸ್ ಅಂಬೇಡ್ಕರ್ ಸ್ಮಾರಕಕ್ಕೆ ಯೋಜನೆ ರೂಪಿಸಿದ್ದ ವಾಜಪೇಯಿ ಫೈಲ್ ನಂತರ ಬಚ್ಚಿಟ್ಟಿದ್ದು ಸೋನಿಯಾ, ಮನಮೋಹನ್‌ಸಿಂಗ ಅಂಬೇಡ್ಕರ್ ಪ್ರಾಣಾರ್ಪಣೆ ಮಾಡಿದ ದೆಹಲಿ ನಿವಾಸ ಸ್ಮಾರಕವಾಗಿಸಿದ್ದು ಬಿಜೆಪಿ ಸರ್ಕಾರ. ಅಂಬೇಡ್ಕರ್‌ರ ಪಂಚ ತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದು ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಕಾಂಗ್ರೆಸ್ ೭೫, ಕಾಂಗ್ರೆಸ್ಸೇತರ ೩೧, ಬಿಜೆಪಿ ೨೨ ತಿದ್ದುಪಡಿ ತಂದಿದೆ. ಸಂವಿಧಾನ, ಪ್ರಜಾಪ್ರಭುತ್ವ, ವಾಕ್, ಜೀವಿಸುವ ಹಕ್ಕು ಕಿತ್ತುಕೊಳ್ಳುವ ತಿದ್ದುಪಡಿ ಮಾಡಿದ್ದು ಕೈ.
  • ಆರ್ಥಿಕ ಮೀಸಲು ಬ್ರಾಹ್ಮಣರಿಗಲ್ಲ.. ಬ್ರಾಹ್ಮಣರು ಕೇಳದೆ ಪ್ರಧಾನಿ ನರೇಂದ್ರ ಮೋದಿ ಶೇ.೧೦ ಮೀಸಲು ನೀಡಿದ್ದಾರೆಂದು ಸುಳ್ಳು ಹರಡುತ್ತಿದ್ದಾರೆ. ದೇಶದಲ್ಲಿ ೧೨೪ ಜಾತಿಗಳು ಹಿಂದುಳಿದ ವರ್ಗಗಳ ಹೊರತುಪಡಿಸಿ ಇದ್ದು, ಅದರಲ್ಲಿನ ಆರ್ಥಿಕ ಹಿಂದುಳಿದವರಿಗೆ ಶೇ.೧೦ ಮೀಸಲು ನೀಡಿದ್ದಾರೆ. ಬರೀ ಬ್ರಾಹ್ಮಣರಿಗೆ ನೀಡಿದ್ದಾರೆ ಎಂಬುದು ಸುಳ್ಳು. ಶೇ.೩೩ ಮಹಿಳಾ ಮೀಸಲು ನೀಡಲಾಗಿತ್ತು ಎಂದು ಎನ್.ಮಹೇಶ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net