ಬಿಜೆಪಿಗೆ ಒಲಿದ ಸಣಾಪುರ ಗ್ರಾಪಂ: ಅಧ್ಯಕ್ಷ-ಉಪಾಧ್ಯಕ್ಷರಾಗಿ ವೈ.ರಮಣಯ್ಯ, ಸಾವಿತ್ರಿ ಆಯ್ಕೆ

Kampli Gp
Published on

ಕಂಪ್ಲಿ: ತಾಲೂಕಿನ ಸಣಾಪುರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ವೈ.ರಮಣಯ್ಯ, ಸಾವಿತ್ರಿ ಸೋಮವಾರ ಆಯ್ಕೆಯಾದರು.

ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷೆ(ಎಸ್ಸಿ ಮಹಿಳೆ) ಸ್ಥಾನಕ್ಕೆ ಸ್ಪರ್ಧಿಸಿದ್ದ ಸಣ್ಣ ಬಾಲೇಸಾಬ್ 9 ಮತ, ಎಚ್.ಹೊನ್ನೂರಮ್ಮ 10 ಮತ ಗಳಿಸಿದರೆ, ವೈ.ರಮಣಯ್ಯ 12, ಸಾವಿತ್ರಿ 11 ಮತ ಪಡೆದು ಜಯಶಾಲಿಯಾದರು ಎಂದು ಚುನಾವಣಾಧಿಕಾರಿ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸ್ ಘೋಷಿಸಿದರು. ಪಿಡಿಒ ಹಾಲಹರವಿ ಶೇಷಗಿರಿ, ಗ್ರಾಪಂ ಸದಸ್ಯರಾದ ಜ್ಯೋತಿ, ಲಕ್ಷ್ಮೀ, ವೀರನಗೌಡರೆಡ್ಡಿ, ಹುಲಿಗೆಮ್ಮ ನಿಂಬೆಗಲು, ಮರಿಯಮ್ಮ, ಬಸವರಾಜ ಕುರುಗೋಡು, ಕೆ.ಭಾರತಿ, ನಾಗಮ್ಮ, ಆರ್.ಕೆ.ಗವಿಸಿದ್ದಪ್ಪ, ರತ್ನಮ್ಮ ಹಗೆದಾಳ್, ಗೂಳಮ್ಮ ಕುರುಗೋಡು, ಈರಮ್ಮ ವಡ್ಡರ, ಪಕ್ಕೀರಪ್ಪ ಅಯ್ಯೋದಿ, ಕೆ.ಭಾಸ್ಕರರೆಡ್ಡಿ, ಲಕ್ಷ್ಮೀದೇವಿ, ಜಿ.ವೆಂಕಟೇಶ, ಕೆ.ಸಂಧ್ಯಾಗಾಯತ್ರಿ ಇದ್ದರು.

ಮೆಟ್ರಿ ಗ್ರಾಪಂಗೆ ಅವಿರೋಧ: ಮೆಟ್ರಿ ಗ್ರಾಪಂ ಅಧ್ಯಕ್ಷೆಯಾಗಿ ಹೊನ್ನೂರಮ್ಮ ಗಂಗಾಧರ, ಉಪಾಧ್ಯಕ್ಷರಾಗಿ ಲೋಕೇಶ್ ಮೆಟ್ರಿ ಅವಿರೋಧವಾಗಿ ಆಯ್ಕೆಗೊಂಡರು. ಅಧ್ಯಕ್ಷ(ಎಸ್ಸಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಗೊಂಡರೆಂದು ಚುನಾವಣಾಧಿಕಾರಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಘೋಷಿಸಿದರು. ಪಿಡಿಒ ಶ್ರೀಶೈಲಗೌಡ, ಕಾರ್ಯದರ್ಶಿ ಎಚ್.ಹುಲುಗಪ್ಪ, ಸದಸ್ಯರಾದ ತಿಮ್ಮಪ್ಪ ಹುಡೇದ್, ಸಿಂದಿಗೇರಿ ಲಕ್ಷ್ಮೀ, ನಾಗರಾಜ ಅಂಗಡಿ, ರೇವತಮ್ಮ ಗೌಡ್ರು, ದೇವೇಂದ್ರಪ್ಪ ಹರಿಜನ, ಗುಡಿಸಲು ಹನುಮಮ್ಮ, ಎಂ.ಜಡೆಪ್ಪ, ಜಯಲಕ್ಷ್ಮೀ, ಮಹಾಂತೇಶ, ತಿಮ್ಮಪ್ಪ, ನಾಗರತ್ನಾ, ಬಾರಿಕರ ಮಲ್ಲಮ್ಮ, ಕುಮಾರಸ್ವಾಮಿ, ಕರಬಸಮ್ಮ, ಗುಂಡಮ್ಮ, ಬಿ.ಗಿರೀಶ್, ನಾಗಮ್ಮ, ಶೆಟ್ಟಿಬಲಜಿಗ ಕುಶಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net