ಬಿಜೆಪಿ ಗ್ರಾಮೀಣ ಪದಾಧಿಕಾರಿಗಳ ನೇಮಕ

bjp logo copy
Published on

ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟನೆ ವಿಸ್ತರಣೆಗಾಗಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಕಗೊಳಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಗ್ರಾಮೀಣ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಾಧ್ಯಕ್ಷರನ್ನಾಗಿ ಗೋವಿಂದ ಪಾಟೀಲ (ರಾಮದುರ್ಗ), ಶ್ಯಾಮಾನಂದ ಪೂಜೇರ (ಗೋಕಾಕ), ಸಂದೀಪ ದೇಶಪಾಂಡೆ (ಕಿತ್ತೂರು), ಪ್ರಮೋದ ಕೊಚೇರಿ (ಖಾನಾಪುರ), ರತ್ನಾ ಗೋಧಿ (ಬೈಲಹೊಂಗಲ), ಯುವರಾಜ ಜಾಧವ (ಬೆಳಗಾವಿ ಗ್ರಾಮೀಣ), ಮಂಜಳಾ ಹಿರೇಮಠ (ಅರಬಾವಿ), ವಿದ್ಯಾರಾಣಿ ಸೊನ್ನದ (ಸವದತ್ತಿ) ನೇಮಕಗೊಂಡಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳಿಗೆ ಕಾರ್ಯದರ್ಶಿಗಳನ್ನಾಗಿ ಬಸವರಾಜ ಹಿರೇಮಠ (ಗೋಕಾಕ), ಸಾವಿತ್ರಿ ಹೊನ್ನಣ್ಣವರ (ಕಿತ್ತೂರು), ವಾಸಂತಿ ಬಡಿಗೇರ (ಖಾನಾಪುರ), ಗುರಪ್ಪ ಮೆಟಗುಡ್ಡ (ಬೈಲಹೊಂಗಲ), ಮುತ್ತೆಪ್ಪ ಮನ್ನಾಪುರ (ಅರಬಾವಿ), ಶಾರದಾ ಪಾಳೇಕರ (ರಾಮದುರ್ಗ), ಚಂದ್ರಶೇಖರ ಪೂಜೇರ (ಸವದತ್ತಿ), ರಂಜನಾ ಕೋಲಕಾರ (ಬೆಳಗಾವಿ ಗ್ರಾಮೀಣ) ನೇಮಕಗೊಂಡಿದ್ದಾರೆ. ಮಾಧ್ಯಮ ಪ್ರಮುಖರಾಗಿ ಫಕೀರಗೌಡ ಸಿದ್ದನಗೌಡರ, ಜಿಲ್ಲಾ ವಕ್ತಾರರಾಗಿ ಸಂಜಯ ಕಂಚಿ, ಸಾಮಾಜಿಕ ಜಾಲತಾಣದ ಪ್ರಮುಖರನ್ನಾಗಿ ಸಿದ್ದರಾಮಯ್ಯ ಹಿರೇಮಠ ಅವರನ್ನು ನಿಯೋಜನೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net