ಮೈಸೂರು: ಕಳೆದ ಹದಿನೈದು ವರ್ಷಗಳಿಂದಲೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರು ಉದಯಗಿರಿ ಪ್ರದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ದೂರಿದರು.
ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡುವಂತೆ ಅರೇಬಿಕ್ ಪದ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರಿಂದ ಈ ಘಟನೆಗೆ ಪ್ರಚೋದನೆ ನೀಡಿದೆ. ತಪ್ಪು ಮಾಡಿರುವವರನ್ನು ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಖಂಡರಾದ ಡಾ.ಆನಂದ್, ಖಮ್ರಾನ್ ಪಾಷ, ಎಸ್.ಎ.ರಹೀಂ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಮೋಹನ್‌ಕುಮಾರ್ ಇದ್ದರು.