

ಬೆಳಗಾವಿ: ರಾಜ್ಯ ರಾಜಕಾರಣದ ಕೇಂದ್ರಬಿಂದು ಗೋಕಾಕ ನಗರದಲ್ಲಿ ಸೋಮವಾರ ಬಿಜೆಪಿಯ ಹಾಲಿ, ಮಾಜಿ ಶಾಸಕರ ರೆಬೆಲ್ ಟೀಂ ಓಡಾಟ ನಡೆಸಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿನ ಬಿಜೆಪಿ ಮಾಜಿ ಶಾಸಕರೊಬ್ಬರು ಸುದೀರ್ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಗೋಕಾಕ ನಗರಕ್ಕೆ ಆಗಮಿಸಿದ ಶಾಸಕರಾದ ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ, ಮಾಜಿ ಶಾಸಕರಾದ ಕುಮಾರ ಬಂಗಾರಪ್ಪ, ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಸೇರಿ ಪ್ರಮುಖ ನಾಯಕರು ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಲಕ್ಷಿ$್ಮದೇವಿ ದರ್ಶನ ಪಡೆದರು. ಜಾರಕಿಹೊಳಿ ಸಹೋದರರು ಆಯೋಜಿಸಿದ್ದ ಭೋಜನ ಸವಿದರು.
ದರ್ಶನ ಪಡೆದ ಬಳಿಕ ಬಿಜೆಪಿಯಲ್ಲಿನ ರಾಜಕೀಯ ವಸ್ತುಸ್ಥಿತಿ, ಆಯಾ ಜಿಲ್ಲೆಗಳಲ್ಲಿನ ಬೆಳಗಣಿಗೆ ಕುರಿತು ಚರ್ಚಿಸಿದರು. 2028ರ ವಿಧಾನಸಭೆ ಚುನಾವಣೆ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ, ಜಿಪಂ, ತಾಪಂ ಚುನಾವಣೆಗಳ ಕುರಿತು ಸಮಗ್ರ ಚರ್ಚಿ ನಡೆಸಿದರು. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ, ವಸ್ತುಸ್ಥಿತಿ ತಿಳಿಸುವ ಏಕೈಕ ಉದ್ದೇಶದಿಂದ ಮಹಾರಾಷ್ಟ್ರದ ಅಹಿಂದ ವರ್ಗದ ನಾಯಕರೊಬ್ಬರ ಮೂಲಕ ಬಿಜೆಪಿ ವರಿಷ್ಠರು ಹಾಗೂ ಆರ್ಎಸ್ಎಸ್ ಪ್ರಮುಖರನ್ನು ಭೇಟಿ ಮಾಡುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಗೋಕಾಕ ನಗರದ ಲಕ್ಷಿ$್ಮದೇವಿ ಜಾತ್ರೆಗೆ ಬರುವಂತೆ ಶಾಸಕ ರಮೇಶ ಜಾರಕಿಹೊಳಿ ಆಹ್ವಾನಿಸಿದ್ದರೆ ವಿನ@ ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ಬಂದಿಲ್ಲ. ಲಕ್ಷಿ$್ಮದೇವಿ ದರ್ಶನ, ಆಶೀರ್ವಾದ ಪಡೆದುಕೊಂಡು ಹೋಗುತ್ತೇವೆ. ಮುಂಬರುವ ದಿನಗಳಲ್ಲಿ ಎಲ್ಲರಿಗೂ ಕಾಲವೇ ಉತ್ತರ ನೀಡುತ್ತದೆ. ಕುಮಾರ ಬಂಗಾರಪ್ಪ ಮಾಜಿ ಶಾಸಕ