ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ: ಮದ್ದೂರು ಮಂಡಲ ಅಧ್ಯಕ್ಷ ಪಿ.ಸಿ.ರಘು ಘೋಷಣೆ

WhatsApp Image 2023-04-03 at 3.04.27 PM
Published on

ಮಂಡ್ಯ: ಬಿಜೆಪಿಯ ಕೆಲ ನಾಯಕರ ವರ್ತನೆಗೆ ಬೇಸತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದೆ ಎಂದು ಮದ್ದೂರು ಮಂಡಲ ಅಧ್ಯಕ್ಷ ಪಿ.ಸಿ.ರಘು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ವಲಸಿಗರಿಗೆ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ರಾಜ್ಯ ಪದಾಧಿಕಾರಿಗಳಿಗೂ ಸ್ಥಳೀಯ ಕಾರ್ಯಕರ್ತರು, ಮಂಡಲ ಅಧ್ಯಕ್ಷರು, ಮುಖಂಡರು ಬೇಕಿಲ್ಲ. ಯಾರನ್ನೂ ಅವರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದ ಮುಖಂಡರೆನಿಸಿಕೊಂಡ ಕೆಲವರು ಬೇರೆಯವರಿಂದ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನೊಂದು ವಾರದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ, ಬೇರೆ ಪಕ್ಷ ಸೇರ್ಪಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖಂಡರಾದ ಗಣೇಶ್‌ಕುಮಾರ್, ನಾಗೇಶ್, ಶ್ರೀನಿವಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net