

ಹುಬ್ಬಳ್ಳಿ: ನಗರದ ಕೇಶ್ವಾಪುರದಲ್ಲಿ ಉತ್ತರ ಕರ್ನಾಟಕ ಬಿಜೆಪಿ ರಾಜಸ್ಥಾನ ಪ್ರವಾಸಿ ಪ್ರಕೋಷ್ಠದ ಸಭೆ ಶುಕ್ರವಾರ ಆಯೋಜಿಸಲಾಗಿತ್ತು.
ಉತ್ತರ ಕರ್ನಾಟಕ ಬಿಜೆಪಿ ರಾಜಸ್ಥಾನ ಪದಕೋಶದ ಸಂಯೋಜಕರಾಗಿ ನಿಯುಕ್ತಿಗೊಂಡಿರುವ ಭರತಕುಮಾರ್ ಜೈನ್ (ಪಾಲ್ರೇಚ) ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಭರತಕುಮಾರ ಜೈನ್ ಅವರು, ಕರ್ನಾಟಕದಲ್ಲಿ ಲಕ್ಷಾಂತರ ರಾಜಸ್ಥಾನಿಗಳು ವಾಸಿಸುತ್ತಿದ್ದಾರೆ. ಅವರಿಗೆ ಬಿಜೆಪಿಯ ಎಲ್ಲ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಕೋಷ್ಠ ರಚನೆ ಮಾಡಲಾಯಿತು. ವಲಸಿಗ ರಾಜಸ್ಥಾನಿ ಸಮುದಾಯದ ಸಕ್ರಿಯ ಕಾರ್ಯಕರ್ತರಾದ ದುಧಾರಾಂ ಚೌಧರಿ, ಬಾಬುಲಾಲ್ ಸವಿರ್, ತ್ರಿವೇಂದ್ರ ಖತ್ರಿ, ಕಾಂತಿಲಾಲ್ ರಾಜಪುರೋಹಿತ, ರಿದ್ಮಲ್ ಸಿಂಗ್, ವಿಕ್ರಮ್ ವಿಷ್ಣೋಯ್, ಮಲಾರಾಮ್ ದೇವಾಸಿ ಅವರನ್ನು ಆಯ್ಕೆ ಮಾಡಲಾಯಿತು.
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ವಲಸಿಗರೊಂದಿಗೆ ಮುಂದಿನ ದಿನಗಳಲ್ಲಿ ವಿವರವಾದ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸುರೇಶ ಜೈನ್, ಅಭಿಷೇಕ್ ಮೆಹ್ತಾ, ರಾಮ್ ಪರೀಕ್, ಹರಿಭಾಯ್ ಸುತಾರ ಉಪಸ್ಥಿತರಿದ್ದರು.