ಶಾಸಕರಿಂದ ಸರ್ವಾಧಿಕಾರಿ ಧೋರಣೆ BJP

ಬಿಜೆಪಿ ವಕ್ತಾರ ರಾಜೇಶ್ ಬನ್ನೂರು
ಬಿಜೆಪಿ ವಕ್ತಾರ ರಾಜೇಶ್ ಬನ್ನೂರು
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಆರೋಪ
ಪುತ್ತೂರು: ಹಾರಾಡಿಯಲ್ಲಿ ರಸ್ತೆ ಆದ ಮೇಲೆ ಚರಂಡಿ ಮಾಡುವುದಾ? ಚರಂಡಿ ಆದ ಮೇಲೆ ರಸ್ತೆ ಮಾಡುವುದಾ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಚರಂಡಿ ಮಾಡುವಲ್ಲಿ ಜಲಸಿರಿ ಪೈಪ್‌ಲೈನ್‌ನಿಂದ ಸೋರಿಕೆಯಾಗುತ್ತಿದ್ದು, ಅದರ ಬಗ್ಗೆ ಗಮನ ಹರಿಸಬೇಕಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಪ್ರತಿಪಕ್ಷದವರು ಪರಿಶೀಲಿಸುವುದನ್ನು ಸಹಿಸದ ಶಾಸಕರು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಣಿಗಳಲ್ಲಿ ಕಟ್‌ಔಟ್ ಹಾಕುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ. ಹಿಂದಿನ ಶಾಸಕರ ಕೊಡುಗೆ ಹೆಚ್ಚಿದ್ದು, ಈಗಿನ ಶಾಸಕರ ಅನುದಾನಗಳಿಲ್ಲ. ತಪ್ಪನ್ನು ಹೇಳಬಾರದು, ಪ್ರತಿಭಟಿಸಬಾರದು ಎಂಬ ದೋರಣೆ ತೋರಿಸಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರಿದ್ದರೂ, ಅಲ್ಲಿಗೆ ತೆರಳುವ ಅವಶ್ಯಕತೆಯೇನಿದೆ. ಬಿಜೆಪಿ ಹಾಗೂ ಪುತ್ತಿಲ ಪರಿಹಾರದ ನಡುವಿನ ಸಣ್ಣ ಮನಸ್ತಾಪದಿಂದ ಅಶೋಕ್ ಕುಮಾರ್ ರೈಗೆ ಗೆಲುವು ಲಭಿಸಿದೆ. ಅಂಗಡಿ ಬಾಗಿಲು ಹಾಕಿ ನಮ್ಮ ಅಂಗಡಿಗೆ ಬರುವುದಾದರೆ ಸ್ವಾಗತಿಸುತ್ತೇವೆ. ನಮ್ಮಲ್ಲಿ ಟಿಕೆಟ್ ಹೈಕಮಾಂಡ್ ತೀರ್ಮಾನವಾಗಿದ್ದು, ಅವರು ಯಾರಿಗೆ ನೀಡಿದರೂ ನಾವು ಒಂದಾಗಿ ಕೆಲಸ ಮಾಡುತ್ತೇವೆ. ಯಾರಿಗೆ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಪುತ್ತೂರಿನ ಈಗಿನ ಶಾಸಕರಂತವರು ಇನ್ನು ಮುಂದೆ ಬರುವುದು ಬೇಡ ಎಂದರು.
ಮೆಡಿಕಲ್ ಕಾಲೇಜಿನ ಜಮೀನಿನಲ್ಲಿ ಮರಗಳನ್ನು ಕಡಿಯಲಾಗಿದೆ. ಅರಣ್ಯ ಇಲಾಖೆ ಲಾರಿ ವಶಕ್ಕೆ ಪಡೆದಿದೆ. ಎರಡು ಲಕ್ಷ ದಂಡ ಹಾಕಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ಮರಗಳು ಎಲ್ಲಿಗೆ ಹೋದವು? ಟೆಂಡರ್ ಯಾರಿಗೆ ಆಗಿದೆ ಎಂದು ಬಹಿರಂಗ ಆಗಬೇಕಲ್ವಾ? ಮರ ಕಡಿಯುವುದಕ್ಕೆ ನಿರ್ದಿಷ್ಟ ಮಾನದಂಡಗಳಿದ್ದು ಪಾಲಿಸಲಾಗಿದೆಯಾ? ಎಂದು ಪ್ರಶ್ನಿಸಿದರು.
ಪ್ರಮುಖರಾದ ಯುವರಾಜ್ ಪೆರಿಯತ್ತೋಡಿ, ವಿದ್ಯಾಗೌರಿ, ಸತೀಶ್ ನಾಯಕ್, ಮಹೇಶ್ ಕೇರಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net