

ಬಾದಾಮಿ: ರೈತರ ಜಮೀನಿನ ಪಹಣಿಯಲ್ಲಿ ವಕ್ಛ್ ಬೋರ್ಡ್ ಆಸ್ತಿ ಎಂದು ನಮೂದಿಸಿರುವ ಸರ್ಕಾರದ ನಡೆ ಖಂಡಿಸಿ ನ.5 ರಂದು ಮಂಗಳವಾರ ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.
ನಗರದ ಕಾನಿಪ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಹಿಂದುಳಿಗೆ ಬಡಿದು ಎಚ್ಚರಿಕೆ ನೀಡುವ ಅವಕಾಶ ಬಂದಿದೆ. ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿಯಾಗಿದೆ. ದೇಶದಲ್ಲಿ ಹಿಂದುಗಳು, ರೈತರು, ಮಠ ಮಾನ್ಯಗಳು ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ರೈತರ ಜಮೀನು ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುತ್ತಿದೆ. ವಿಧಾನಸಭೆ, ವಿಕಾಸ ಸೌಧ ಒಳಗೊಂಡು 9 ಲಕ್ಷ ರೂ. ಎಕರೆ ಜಮೀನು ಇದೆ ಎನ್ನುತ್ತಿರುವುದು ? ಸಚಿವ ಜಮೀರ್ ಅಹ್ಮದ ಖಾನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದ ಮಾಡುತ್ತಿದ್ದಾರೆ.
ರೈತರ ಪಹಣಿಯಲ್ಲಿ ಕ್ಫ್ ಆಸ್ತಿ ನಮೂದಾಗುತ್ತಿದೆ. ಅದಾಲತ್ ನಡೆಸಿ ವಶ ಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಇದಾಗಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ, ಹೋರಾಟದಲ್ಲಿ ರೈತರು, ಹಿಂದುಗಳು, ಕಾರ್ಯಕರ್ತರು ಸೇರಿ ಎಲ್ಲ ಸಮಾಜದವರು ಭಾಗವಹಿಸಬೇಕೆಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಮಾತನಾಡಿ, ನ.5 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಪಿಕಾರ್ಡ್ ಬ್ಯಾಂಕ್ ಆವರಣದಿಂದ ಆರಂಭವಾಗಿ ರಾಮದುರ್ಗ ವೃತ್ತ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.
ಮುಖಂಡರಾದ ಎ್.ಆರ್. ಪಾಟೀಲ(ಖ್ಯಾಡ), ಮುತ್ತು ಉಳಾಗಡ್ಡಿ, ಮಾಗುಂಡಪ್ಪ ನೋಟಗಾರ, ಪ್ರಕಾಶ ನಾಯ್ಕರ, ಹೊನ್ನಯ್ಯ ಹಿರೇಮಠ, ಮಹಾಂತೇಶ ತಳವಾರ, ಕೆ.ಡಿ. ಜ್ಯೋತಿ, ಬೇಲೂರಪ್ಪ ವಡ್ಡರ, ಅಶೋಕ ಯಲಿಗಾರ, ಎಚ್.ಕೆ. ಬೆಳ್ಳಿಗುಂಡಿ ಇತರರಿದ್ದರು.