ಏ.24ರಂದು ಬಿಜೆಪಿಯಿಂದ 'ಜನಿವಾರ' ಪ್ರತಿಭಟನೆ...

BJP 1
Published on

ಡಿಸಿ ಕಚೇರಿ ಬಳಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಧರಣಿ

ಉಡುಪಿ: ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ (ಜನಿವಾರ) ತೆಗೆಸಿದ ಘಟನೆ ಖಂಡಿಸಿ ಉಡುಪಿ ನಗರ ಬಿಜೆಪಿ ವತಿಯಿಂದ ಶಾಸಕ ಯಶ್​ಪಾಲ್​ ಸುವರ್ಣ ನೇತೃತ್ವದಲ್ಲಿ ಏ.24ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ.

ಧಾರ್ಮಿಕ ಮುಖಂಡರಾದ ದಾಮೋದರ ಶರ್ಮ, ಸಗ್ರಿ ಆನಂದ ತೀರ್ಥ, ಚೇಂಪಿ ರಾಮಚಂದ್ರ ಭಟ್​ ಹಾಗೂ ಶಿವಾನಂದ ನಾಯ್ಕ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.

ಹಿಂದು ಸಮಾಜಿಗರೆಲ್ಲ ಪಾಲ್ಗೊಳ್ಳಲಿ

ಸಿಇಟಿ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಕತ್ತರಿಸುವ ಮೂಲಕ ಅಧಿಕಾರಿಗಳು ಹಾಗೂ ಕಾಂಗ್ರೆಸ್​ ಸರ್ಕಾರ ಹಿಂದು ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಇದಕ್ಕೆಲ್ಲ ಕಾರಣ ಹಿಂದು ವಿರೋಧಿ ಹಾಗೂ ಮತಾಂಧ ಕಾಂಗ್ರೆಸ್​ ಸರ್ಕಾರವೇ ಕಾರಣವಾಗಿದೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಸಮಾಜಿಗರು ಪಾಲ್ಗೊಳ್ಳಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net