ಕಿಲ್ಲೆದಾರ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

New Bjp New
Published on

ಹುಬ್ಬಳ್ಳಿ : ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣದ ಆರೋಪಿ ಬತುಲ್ ಕಿಲ್ಲೆದಾರಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ದುರ್ಗದಬೈಲ್​ನ ಶಹರ ಪೊಲೀಸ್ ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ-ಧಾರವಾಡ ಪೂರ್ವ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಆರೋಪಿ ಬತುಲ್ ಕಿಲ್ಲೆದಾರಳಿಗೆ ಕಾಂಗ್ರೆಸ್ ಪ್ರಭಾವಿಗಳ ಅಭಯ ಇದೆ ಎಂದು ಆರೋಪಿಸಿದರು.

ಧಾರವಾಡ ವಿಭಾಗದ ಸಹ ಪ್ರಭಾರಿ ನಾರಾಯಣ ಜರತಾರಘರ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸತೀಶ ಶೇಜವಾಡಕರ, ಜಿಲ್ಲಾ ವಕ್ತಾರ ರವಿ ನಾಯ್ಕ, ಜಗದೀಶ ಬುಳ್ಳಾನವರ, ರಾಜು ಜರತಾರಘರ, ರಾಜು ಕಾಳೆ, ಪ್ರಭು ನವಲಗುಂದಮಠ, ವೆಂಕಟೇಶ ಕಾಟವೆ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ಲಕ್ಷ್ಮೀಕಾಂತ ಘೋಡಕೆ, ಅರುಣ ಹುದ್ಲಿ, ಸಂತೋಷ ಅರಕೇರಿ, ಶಶಿಕಾಂತ ಬಿಜವಾಡ, ರಾಜು ಕೊರ್ಯುಣಮಠ, ಅಣ್ಣಪ್ಪ ಗೋಕಾಕ, ಅನುಪ ಬಿಜವಾಡ, ಸುಭಾಸ ಅಥಣಿ, ಮಿಥುನ ಚವ್ಹಾಣ, ಕೃಷ್ಣಾ ಗಂಡಗಾಳೇಕರ, ನಾಗರತ್ನ ಬಳ್ಳಾರಿ, ಶುಭಾ ನಾಕೋಡ, ಸರೋಜಾ ಶಾಂತಗಿರಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net