ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

25 ckm 2
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು. ಎಂ.ಆರ್.ದೇವರಾಜ ಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ, ಕೆ.ಎಸ್.ಪುಷ್ಪರಾಜ್, ಕುರುವಂಗಿ ವೆಂಕಟೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡ ಹಗರಣದಲ್ಲಿ ಅಕ್ರಮವೆಸಗಿರುವುದು ನ್ಯಾಯಪೀಠದಲ್ಲಿ ಸಾಬೀತಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಜಾದ್ ಪಾರ್ಕ್ಗೆ ಆಗಮಿಸಿ ಅಲ್ಲಿ ಪ್ರತಿಭಟನೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಮೂಡಾ ಪ್ರಕರಣದಲ್ಲಿ ಅಕ್ರಮ ನಡೆಸಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಸಜ್ಜನ ರಾಜಕಾರಣಿ ಎಂಬ ಬಿರುದು ಹೊತ್ತುಕೊಂಡಿದ್ದ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ನ್ಯಾಯಪೀಠವು ಮುಡ ಹಗರಣದ ಸತ್ಯಾಂಶವನ್ನು ಬಯಲಿಗೆಳೆದಿದ್ದರೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊAಡಿರುವುದು ನಾಚಿಕೇಡಿನ ಸಂಗತಿ ಎಂದು ದೂರಿದರು.
ಸತ್ಯಾಂಶವನ್ನು ಮುಚ್ಚಿಡುವ ಸಲುವಾಗಿ ಸಿದ್ದರಾಮಯ್ಯ ದುಬಾರಿ ವೆಚ್ಚದ ವಕೀಲರನ್ನು ನೇಮಿಸಿ ವಾದ ಮಂಡಿಸಿದ್ದರು. ಆದರೆ ನ್ಯಾಯಪೀಠವು ಕೂಲಂಕಷವಾಗಿ ಪರಿಗಣಿಸಿ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಿದೆ. ಹೀಗಾಗಿ ಕಳಂಕ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮೂಡ ಹಗರಣದಲ್ಲಿ ಪಾಲುದಾರರಾಗಿರುವ ಮುಖ್ಯಮಂತ್ರಿಗಳ ಮಡದಿ, ಸಚಿವರು ಹಾಗೂ ಅಧಿಕಾರಿಗಳ ವೃಂದದವರನ್ನು ಕೂಡಲೇ ಬಂಧಿಸಬೇಕು. ಇದನ್ನು ಹೊರತುಪಡಿಸಿ ಮುಖ್ಯಮಂತ್ರಿಗಳು ಕುರ್ಚಿಗೆ ಅಂಟಿಕೊAಡು ನಾಟಕೀಯ ವರ್ತನೆ ಪ್ರದರ್ಶಿಸಿದರೆ ವಿಭಿನ್ನ ಚಳವಳಿ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುಳ್ಳಿನ ಪ್ರಕರಣಕ್ಕೆ ಸಿಲುಕಿದ್ದ ವೇಳೆ ಖುದ್ದು ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಕಲ್ಪಿಸಿ ಎಂದಿದ್ದರು. ಇದೀಗ ಕೋಟಿಗಟ್ಟಲೇ ಹಗರಣದಲ್ಲಿ ಸಿಲುಕಿ ಕೋರ್ಟ್ ಛೀಮಾರಿ ಹಾಕಿದರೂ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸದಿರುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದರು.
ರಾಜ್ಯದ ಜನತೆಯ ಮೇಲೆ ಸಿಎಂಗೆ ಅಭಿಮಾನವಿದ್ದರೆ ನೈತಿಕವಾಗಿ ಸ್ಥಾನದಿಂದ ಕೆಳಗಿಳಿಯಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ವಿಫಲಗೊಂಡಿದೆ. ಅಕ್ಕಿ, ಗೃಹಲಕ್ಷ್ಮೀ, ಯುವನಿಧಿಗಳು ಹುಸಿಗೊಂಡಿವೆ. ಇದೀಗ ಅಕ್ರಮದ ಅರೋಪ ಹೊತ್ತ ಸಿಎಂ ಭಂಡತನದಿAದ ಮುಂದುವರೆದರೆ ರಾಜ್ಯದ ಜನತೆ ಸಿಡಿದೇಳುವುದರಲ್ಲಿ ಸಂಶಯವಿಲ್ಲ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕು. ಸಿಎಂ ಸುಳ್ಳಿನ ಮುಖವಾಡವನ್ನು ನ್ಯಾಯಾಲಯವು ತೋರಿಸಿದೆ. ಸಂವಿಧಾನಕ್ಕೆ ಗೌರವಿಸುವ ಮೂಲಕ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗಿಳಿದು ಹೋರಾಟ ನಡೆಸಬೇಕು. ಮುಡ ಹಗರಣದಲ್ಲಿ ಸಿಎಂ ಮಂಡದಿ ಐಟಿ ರಿಟನ್ ಮಾಡಿಸಿಲ್ಲ. ದಾಖಲೆಗಳಲ್ಲಿ ತಿದ್ದುಪಡಿಗೊಳಿಸಿ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕುರುವಂಗಿ ವೆಂಕಟೇಶ್, ಕೆ.ಎಸ್.ಪುಷ್ಪರಾಜ್, ಸಿ.ಎಚ್.ಲೋಕೇಶ್, ಸೋಮಶೇಖರ್, ಹಿರೇಮಗಳೂರು ಪುಟ್ಟಸ್ವಾಮಿ, ಅಮೃತೇಶ್ ಚೆನ್ನಕೇಶವ, ಅನ್ವರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net