ಡಿ.ಕೆ. ಶಿವಕುಮಾರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

New Bjp New
Published on

ಹುಬ್ಬಳ್ಳಿ : ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರದಂದು ಪ್ರತಿಭಟನೆ ನಡೆಸಿ, ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಕಾಂಗ್ರೆಸ್​ ಮೊದಲಿನಿಂದಲೂ ಡಾ. ಬಿ.ಆರ್​. ಅಂಬೇಡ್ಕರ ಹಾಗೂ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತ ಬಂದಿದೆ ಎಂದು ದೂರಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಂವಿಧಾನ ವಿರೋಧಿ ಹೇಳಿಕೆಗೆ ದೇಶದ ಜನತೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಜು ಕಾಳೆ, ಮಂಜುನಾಥ ಕಾಟ್ಕರ, ಬೀರಪ್ಪ ಖಂಡೇಕಾರ, ರಾಜಣ್ಣ ಕೊರವಿ, ಸತೀಶ ಶೇಜವಾಡಕರ, ನಾರಾಯಣ ಜರತಾರರ, ರಾಧಾಬಾಯಿ ಸಾರೆ, ಚಂದ್ರಿಕಾ ಮೇಸ್ತ್ರಿ, ರೂಪಾ ಶೆಟ್ಟಿ, ದತ್ತಮೂತಿರ್ ಕುಲಕಣಿರ್, ರವಿ ನಾಯಕ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಪ್ರಕಾಶ ಕ್ಯಾರಕಟ್ಟಿ, ಸಂತೋಷ ಅರಿಕೇರಿ, ಕೃಷ್ಣ ಗಂಡಗಾಳೆಕರ, ಅಶೋಕ ವಾಲ್ಮೀಕಿ, ಸುನಿತಾ ಚವ್ಹಾಣ, ನಾಗರತ್ನ ಬಳ್ಳಾರಿ, ಇಂದಿರಾ ಚವ್ಹಾಣ, ಲಿಂಗರಾಜ ಬಳಗಟ್ಟಿ, ಅನುಪ ಬಿಜಯವಾಡ, ಲಕ್ಷಿ$್ಮ್ಮಕಾಂತ ಘೋಡಕೆ, ವೆಂಕಟೇಶ ಕಾಟವೆ, ಚೇತನ ಬರದ್ವಾಡ, ಪ್ರವಿಣ ಪವಾರ, ಪ್ರಕಾಶ ಶೃಂಗೇರಿ, ಸಂಗಮ ಹಂಜಿ, ಮಿಥುನ ಚವ್ಹಾಣ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net