ಭ್ರಷ್ಟಾಚಾರದಲ್ಲಿ ಮುಳುಗೆದ್ದ ರಾಜ್ಯ ಸರ್ಕಾರ, ಬಿಜೆಪಿ ಪ್ರತಿಭಟನೆ

SIRSI PROTEST
Published on

ಶಿರಸಿ: ಕಾಂಗ್ರೆಸ್ ಸರ್ಕಾರದ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ಶಿರಸಿ ಗ್ರಾಮೀಣ ಮಂಡಲದ ವತಿಯಿಂದ ಅಂಡಗಿ ಗ್ರಾಮ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮ್ ಕುಮಾರ್ ನಾಯ್ಕ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇರೆಲ್ಲ ಹಗರಣ ನಡೆಸಲು ದುಡ್ಡಿರುತ್ತದೆ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡಲು ಹಣ ಇರುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ ಸಾಮಾನ್ಯ ಜನರಿಗೆ 2022 ನಂತರ ಒಂದೇ ಒಂದು ಮನೆ ಬಿಡುಗಡೆ ಆಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅತಿಕ್ರಮಣದಾರರಿಗೂ ಮನೆ ನೀಡಲಾಗಿತ್ತು. ಆದರೆ, ಅದರ ಹಣವನ್ನೂ ನೀಡದೇ ಈ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದರು.

ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ಮಣಿಕಂಠ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆ ಭೂಮಿಪೂಜೆ ಆಗಿಲ್ಲ. 25ಕೆವಿ ಟ್ರಾನ್ಸ್ ಫಾರ್ಮರ್ ಅಳವಡಿಸಿ ಈ ಭಾಗಕ್ಕೆ ಸಮರ್ಪಕ ವಿದ್ಯುತ್ ನೀಡಲು ಬಿಜೆಪಿ ಸರ್ಕಾರ ಕಾರ್ಯ ಯೋಜನೆ ರೂಪಿಸಿತ್ತು. ಅದನ್ನು ಅಳವಡಿಕೆ ಮಾಡದೇ ರೈತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.

ಗ್ರಾಮೀಣ ಮಂಡಲದ ಉಪಾಧ್ಯಕ್ಷ ರಾಘು ನಾಯ್ಕ, ಅಂಡಗಿ ಶಕ್ತಿ ಕೇಂದ್ರದ ಅಧ್ಯಕ್ಷ ರವಿ ದೇವಾಡಿಗ, ಅಂಡಗಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಭೀಮಣ್ಣ ನಾಯ್ಕ ರಾಮಪುರ, ಬೂತ್ ಅಧ್ಯಕ್ಷರಾದ ಸಚಿನ್ ಗೌಡ ಅಂಡಗಿ, ಶಿವರಾಜ ರಾಮಾಪುರ, ಪ್ರಭಾಕರ ನಾಯ್ಕ ಕಲಕರಡಿ, ರಾಜೇಶ ದೇವಾಡಿಗ, ನಾಗರಾಜ ನಾಯ್ಕ, ಪರಶುರಾಮ ಹೆಬ್ಬತ್ತಿ, ಪಕ್ಷದ ಮುಖಂಡರುಗಳಾದ ಸಂತೋಷ ಗೌಡ, ಕೃಷ್ಣಪ್ಪ ನಾಯ್ಕ, ಸಾಯಿನಾಥ ರಾಮಾಪುರ, ಅಶೋಕ ವಡ್ಡರ್, ರಾಮಪುರ ರವಿ, ನಾಯ್ಕ ಕಿರುವತ್ತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net