ಬೆಲೆ ಏರಿಕೆ, ೧೮ ಶಾಸಕರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ

BJP PROTEST
BJP PROTEST
Published on

 ರಾಯಚೂರು ಬೆಲೆ ಏರಿಕೆ, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ಕಾಮಗಾರಿಗಳಲ್ಲಿ ಮೀಸಲಾತಿ . ಎಸ್‌ಸಿ, ಎಸ್‌ಟಿ ಮೀಸಲು ಹಣದ ದುರ್ಬಳಕೆ, ಬಿಜೆಪಿಯ ೧೮ ಶಾಸಕರ ಅಮಾನತನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪಕ್ಷದಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮಧ್ಯಮ ವರ್ಗದವರ ಬದುಕಿಗೆ ಕೊಡಲಿ ಏಟಿನಂತೆ ಎರಗಿದೆ. ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಽಸಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಜನರ ಬದುಕಿಗೆ ರಾಜ್ಯ ಸರ್ಕಾರ ಕೊಡಲಿ ಏಟು ನೀಡುತ್ತಿದೆ. ಕೆಲದಿನಗಳ ಹಿಂದೆ ಸರ್ಕಾರದ ನಿರ್ಧಾರದಿಂದ ಡೀಸೆಲ್ ದರವೂ ಹೆಚ್ಚಿದ್ದು, ದಿನಬಳಕೆ ವಸ್ತುಗಳು, ಸರಕು ಸಾಮಾಗ್ರಿಗಳ ದರವೂ ಏರಿಕೆ ಕಂಡಿದೆ.

ಆದ್ದರಿಂದ ಸರಕಾರವು ಈ ಕೂಡಲೇ ಏರಿಸಿದ ಎಲ್ಲಾ ದರಗಳನ್ನು ಹಿಂಪಡೆಯಬೇಕು. ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಸರಕಾರಿ ಕಾಮಗಾರಿಗಳಲ್ಲಿ ಶೇ.೪ ರಷ್ಟು ಮೀಸಲಾತಿ ಕೊಡುವ ಸರ್ಕಾರದ ತುಷ್ಟಿಕರಣದ ನಿರ್ಧಾರವನ್ನು ಬಿಜೆಪಿ ವಿರೋಽಸುತ್ತದೆ. ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರವರು ರಚಿಸಿದ ನಮ್ಮ ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದರ ನಡುವೆ ಮೀಸಲಾತಿ ನೀಡಲಾಗಿದೆ. ಇದು ಅತ್ಯಂತ ಖಂಡನಾರ್ಹವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಈ ಸಂಬAಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್ಗಳೂ ತೀರ್ಪು ಕೊಟ್ಟಿವೆ. ಇದು ಸಂವಿಧಾನ ವಿರೋಽ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ-ಅವಮಾನ ಮಾಡುವ ನಿರ್ಧಾರ ಅಕ್ಷಮ್ಯ ಅಪರಾಧವಾಗಿದೆ. ಸರಕಾರವು

ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ, ತ್ರಿವಿಕ್ರಮ ಜೋಷಿ, ನಗರ ಮಂಡಲ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ರಾಜಕುಮಾರ, ಜಿ.ಶಂಕರ ರೆಡ್ಡಿ, ಸಂತೋಷ ರಾಜಗುರು, ಈ.ಶಶಿರಾಜ, ವಿ.ನಾಗರಾಜ, ಜಿ.ಮಹೇಂದ್ರರೆಡ್ಡಿ, ಕಡಗೋಲು ರಾಮಚಂದ್ರ, ಕೊಟ್ರೇಶಪ್ಪ, ವಿಜಯಕುಮಾರ ಸಜ್ಜನ, ಪಿ.ಯಲ್ಲಪ್ಪ, ಎನ್.ವಿನಾಯಕ ರಾವ್,ಲಲಿತಾ ಆಂಜನೇಯ ಕಡಗೋಲು, ಎನ್.ಶ್ರೀನಿವಾಸ ರೆಡ್ಡಿ, ಯು.ನರಸರೆಡ್ಡಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net